ಪಂಜಾಬ್ನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ನಟ ಹಾಗೂ ಸಮಾಜ ಸೇವಕ ಸೋನು ಸೂದ್ ಸಂತ್ರಸ್ತರ ರಕ್ಷಣೆಗೆ ಸಹಾಯವಾಣಿ ಆರಂಭಿಸಿದ್ದಾರೆ. ಈ ಸಂಬಂಧ ಟ್ವಿಟರ್ನಲ್ಲಿ ಸೋನು ಸೂದ್ ಮಾಹಿತಿ ಶೇರ್ ಮಾಡಿದ್ದಾರೆ.
ನನ್ನ ಪ್ರೀತಿಯ ಪಂಜಾಬ್ ಜನತೆ, ನಿಮಗಾದ ನೋವಿಗೆ ನನ್ನ ಹೃದಯ ಮಿಡಿಯುತ್ತಿದೆ. ನನ್ನನ್ನು ಬೆಳೆಸಿದ ಭೂಮಿಯನ್ನು ಪ್ರವಾಹವು ಹಾಳು ಮಾಡುತ್ತಿದೆ. ಇದನ್ನು ನೋಡಿ ಸುಮ್ಮನಿರಲು ನನ್ನಿಂದ ಸಾಧ್ಯವಿಲ್ಲ. ಪಂಜಾಬ್ ನನಗೆ ತುಂಬಾನೇ ಕೊಟ್ಟಿದೆ. ಈಗ ಅದನ್ನು ಹಿಂತಿರುಗಿಸುವ ಸಂದರ್ಭ ಬಂದಿದೆ. ನಾವು ಒಟ್ಟಾಗಿ ಈ ಚಂಡಮಾರುತ ಎದುರಿಸೋಣ ಎಂದು ಕರೆ ನೀಡಿದ್ದಾರೆ.
ಭಾರೀ ಮಳೆಯಿಂದಾಗಿ ಪಂಜಾಬ್ ಮತ್ತು ಹರಿಯಾಣದ ಹಲವಾರು ಜಿಲ್ಲೆಗಳು ಸಂಪೂರ್ಣ ಜಲಾವೃತಗೊಂಡಿವೆ. ಅಪಾರ ಪ್ರಮಾಣದಲ್ಲಿ ಕೃಷಿ ಭೂಮಿ ಹಾಗೂ ವಸತಿ ಪ್ರದೇಶಗಳು ಹಾನಿಗೆ ಒಳಗಾಗಿವೆ. ಪಂಜಾಬ್ ಮತ್ತು ಹರಿಯಾಣದ ಬಹುತೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಕಡಿಮೆಯಾಗಿದೆಯಾದರೂ ಸಹ ಅಧಿಕಾರಿಗಳು ಇನ್ನೂ ಪರಿಹಾರ ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ.
ಕೋವಿಡ್ 19 ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೋನು ಸೂದ್ರ ಪರೋಪಕಾರಿ ಕಾರ್ಯಗಳನ್ನು ಗುರುತಿಸಿ ಪಂಜಾಬ್ ಸರ್ಕಾರವು ಅವರಿಗೆ ಸ್ಟೇಟ್ ಐಕಾನ್ ಗೌರವ ನೀಡಿದೆ. ಇದಕ್ಕೂ ಮೊದಲು, ಹರಿಯಾಣದಲ್ಲಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ಸಹಾಯ ಮಾಡಲು ರಣದೀಪ್ ಹೂಡಾ ಮುಂದೆ ಬಂದಿದ್ದರು. ಅವರ ಗೆಳತಿ ಲಿನ್ ಲೈಶ್ರಾಮ್ ಕೂಡ ಪರಿಹಾರ ಕಾರ್ಯದಲ್ಲಿ ಸಾಥ್ ನೀಡಿದ್ದಾರೆ.
https://twitter.com/SonuSood/status/1684094281940881409