ವಾಹನ ಚಲಾಯಿಸುವಾಗ ಸಂಗೀತ ನುಡಿಯುತ್ತೆ ಈ ರಸ್ತೆ….! ಹಳೆ ವಿಡಿಯೋ ಮತ್ತೆ ಹಂಚಿಕೊಂಡ ಆನಂದ್ ಮಹೀಂದ್ರಾ 26-07-2023 1:08PM IST / No Comments / Posted In: Automobile News, Car News, Latest News, Live News, International ರಸ್ತೆಗಳ ಮೇಲೆ ವಾಹನಗಳು ಸಂಚರಿಸೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಎಂದಾದರೂ ಸಂಗೀತದ ರಸ್ತೆ ಬಗ್ಗೆ ಕೇಳಿದ್ದೀರಾ..? ಹಂಗೇರಿಯಲ್ಲಿ ಇಂತಹದ್ದೊಂದು ವಿಸ್ಮಯಕಾರಿ ರಸ್ತೆಯಿದೆ. ಇಂತಹದೊಂದು ಆಶ್ಚರ್ಯಕಾರಿ ವಿಚಾರವನ್ನು ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಹಂಗೇರಿ ರಸ್ತೆ 67ರಲ್ಲಿ ವ್ಯಕ್ತಿಯೊಬ್ಬರು ಸಂಗೀತದ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಸೂಕ್ತವಾದ ವೇಗದಲ್ಲಿ ಕಾರು ಈ ರಸ್ತೆಯ ಮೇಲೆ ಸಂಚರಿಸಿದಾಗ ರಸ್ತೆಯಿಂದ ಸಂಗೀತ ನುಡಿಯುತ್ತದೆ. ಇದೊಂದು ಹಳೆಯ ವಿಡಿಯೋವಾಗಿದ್ದು ಇದೀಗ ಎಕ್ಸ್ (ಮೊದಲ ಹೆಸರು ಟ್ವಿಟರ್)ನಲ್ಲಿ ಸಖತ್ ವೈರಲ್ ಆಗಿದೆ. ಆನಂದ್ ಮಹೀಂದ್ರಾ ಈ ವಿಡಿಯೋ ಮತ್ತೊಮ್ಮೆ ಟ್ರೆಂಡ್ ಆಗುವಂತೆ ಮಾಡಿದ್ದಾರೆ. ನಿತಿನ್ ಗಡ್ಕರಿ ನಮ್ಮ ಹೆದ್ದಾರಿಗಳನ್ನು ಹಾಡುವಂತೆ ಮಾಡುತ್ತಾರೆ ಎಂಬ ಖಾತರಿ ನನಗಿದೆ. ಆದರೆ ಯಾವ ವೇಗದಲ್ಲಿ ಯಾವ ಹಾಡು ಪ್ಲೇ ಆಗಬಹುದು ಎಂಬುದನ್ನು ನಿರ್ಧರಿಸೋದು ಕಷ್ಟವಾಗಬಹುದು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ರಾಜ್ಯದಿಂದ ರಾಜ್ಯಕ್ಕೆ ಹಾಡಿನ ಆಯ್ಕೆಗಳು ಬದಲಾಗಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ. Hungary’s musical road will sing to drivers going the right speed pic.twitter.com/AdI9efp88z — Historic Vids (@historyinmemes) July 24, 2023