ನವದೆಹಲಿ: ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ‘ಇಂಡಿಯಾ’ ಎಂದು ನಾಮಕರಣ ಮಾಡಿರುವ ಬಗ್ಗೆ ಪ್ರಧಾನಿ ಮೋದಿ ಟೇಕಿಸಿದ್ದಾರೆ.
ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟಕ್ಕೆ ದಿಕ್ಕು ದೆಸೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
‘ಇಂಡಿಯಾ’ ಮೈತ್ರಿಕೂಟವನ್ನು ನಿಷೇಧಿತ ಇಂಡಿಯನ್ ಮುಜಾಹಿದ್ದಿನ್ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಹೋಲಿಸಿದ್ದಾರೆ. ಭಾರತವನ್ನು ಕೊಳ್ಳೆ ಹೊಡೆದ ಈಸ್ಟ್ ಇಂಡಿಯಾ ಕಂಪನಿ ಕೂಡ ಇಂಡಿಯಾ ಹೆಸರು ಹೊಂದಿತ್ತು. ದಿಕ್ಕೆಟ್ಟು ಹೋದ 26 ಪಕ್ಷಗಳು ಒಂದಾಗಿ ಇಂಡಿಯಾ ಎಂದು ಹೆಸರು ಹೊಂದಿವೆ ಎಂದರು.
ಉಗ್ರಸಂಘಟನೆಗಳ ಹೆಸರಲ್ಲೂ ಇಂಡಿಯಾ ಇದೆ. ಭಾರತ ಕೊಳ್ಳೆ ಹೊಡೆದ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯಲ್ಲೂ ಇಂಡಿಯಾ ಹೆಸರಿದೆ. ಈ ಇಂಡಿಯಾ ಮೈತ್ರಿಕೂಟದ ನಾಯಕರು ಭಾರತದ ಸಂಪತ್ತನ್ನು ಲೂಟಿ ಮಾಡುವವರೇ, ಇದು ಕೊಳ್ಳೆಹೊಡೆಯುವವರ ಲೂಟಿಕೋರರ ಗುಂಪು ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.