ಕಲಬುರಗಿ: ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಕರದಾಳ ಗ್ರಾಮದ ಹೊರವಲಯದ ಜಮೀನಿನಲ್ಲಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ರೈತ ಹಾಗೂ ಎತ್ತು ಮೃತಪಟ್ಟನೆ ನಡೆದಿದೆ.
24 ವರ್ಷದ ಯುವ ರೈತ ಬಸವರಾಜ ಹೆಗಲೇರಿ ಮೃತಪಟ್ಟವರು. ಅವಘಡದಲ್ಲಿ ಎತ್ತು ಕೂಡ ಸಾವನ್ನಪ್ಪಿದೆ. ಸಂಜೆ ಜಮೀನಿನಿಂದ ಮನೆಗೆ ಬರುವ ಸಂದರ್ಭದಲ್ಲಿ ಹೊಲದಲ್ಲಿ ಜೋತು ಬಿದ್ದ ವಿದ್ಯುತ್ ತಂತಿಗೆ ಬಾರುಕೋಲು ತಾಗಿ ವಿದ್ಯುತ್ ಪ್ರವಹಿಸಿ ಬಸವರಾಜ್ ಮೃತಪಟ್ಟಿದ್ದಾರೆ. ಅವಘಡದಲ್ಲಿ ವಿದ್ಯುತ್ ತಗುಲಿ ಎತ್ತು ಕೂಡ ಸಾವನ್ನಪ್ಪಿದೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.