
ಉಡುಪಿ: ಬಾರ್ ಎದುರಲ್ಲೇ ಯುವಕರು ಹೊಡೆದಾಡಿಕೊಂಡಿದ್ದು, ವಾಹನದ ಗಾಜು ಪುಡಿಪುಡಿ ಮಾಡಿದ್ದಾರೆ. ಉಡುಪಿ ಜಿಲ್ಲೆ ಬೈಂದೂರು ಹೊರವಲಯದ ಶೆಟ್ಟಿ ಬಾರ್ ಬಳಿ ಪುಂಡಾಟ ನಡೆದಿದೆ.
ವಾಹನಕ್ಕೆ ಅಡ್ಡ ಬಂದ ಹಿನ್ನೆಲೆಯಲ್ಲಿ ಗಲಾಟೆ ಆರಂಭವಾಗಿ ಹೊಡೆದಾಟಕ್ಕೆ ತಿರುಗಿದ್ದು, ಟಾಟಾ ಏಸ್ ವಾಹನದ ಗಾಜು ಹಾಳು ಮಾಡಿದ ಪುಂಡರ ಗುಂಪು ವಾಹನದಲ್ಲಿದ್ದ ರಮೇಶ್ ದೇವಾಡಿಗ, ರವಿ ಪೂಜಾರಿ ಮೇಲೆ ಹಲ್ಲೆ ನಡೆಸಿದೆ.
ನಿಖಿಲೇಶ್, ನಿತೇಶ್, ಕಿಶೋರ್, ಪ್ರಜ್ವಲ್ ಶೆಟ್ಟಿ, ಮಣಿಕಂಠ ಹಲ್ಲೆ ಮಾಡಿದ್ದಾರೆನ್ನಲಾಗಿದೆ. ಹೆಲ್ಮೆಟ್, ಸೋಡಾ ಬಾಟಲಿಯಿಂದ ಪುಂಡರ ಗುಂಪು ಹಲ್ಲೆ ನಡೆಸಿದೆ. ಇಬ್ಬರ ಮೇಲೆ ಹಲ್ಲೆ ಮಾಡಿ ವಾಹನದ ಗಾಜು ಒಡೆದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಬೈಂದೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.