‘ಗೃಹಲಕ್ಷ್ಮಿ’ಗೆ ಅರ್ಜಿ ಹಾಕಿದ್ರಾ? ನಂಬರ್ ಕೊಡ್ತೇನೆ ಬೇಗ ಅರ್ಜಿ ಹಾಕಿ: ಡಿ ಗ್ರೂಪ್ ನೌಕರರ ವಿಚಾರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು: ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದೀರಾ? ನಂಬರ್ ಕೊಡ್ತೇನೆ, ಬೇಗ ಅರ್ಜಿ ಹಾಕಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾಳಜಿ ತೋರಿದ್ದಾರೆ.

ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಗುರುವಾರ ಊಟದ ವೇಳೆ ಅಲ್ಲಿದ್ದ ಡಿ ಗ್ರೂಪ್ ಮಹಿಳಾ ನೌಕರರನ್ನು ಅವರು ವಿಚಾರಿಸಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಊಟ ಮಾಡುತ್ತಿದ್ದ ವೇಳೆ ಅಲ್ಲಿ ಸ್ವಚ್ಚತೆಯ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯರನ್ನು ಹತ್ತಿರ ಕರೆದು ಯೋಗ ಕ್ಷೇಮ ವಿಚಾರಿಸುವುದರ ಜೊತೆಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದೀರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಮಹಿಳಾ ಕಾರ್ಮಿಕರು ಇನ್ನೂ ಇಲ್ಲ ಮೇಡಂ ಎಂದರು.

ಆಗ, ನಂಬರ್ ಕೊಡುತ್ತೇನೆ. ಅದಕ್ಕೆ ಎಸ್ಎಂಎಸ್ ಮಾಡಿ, ಅದಷ್ಟು ಬೇಗ ಅರ್ಜಿ ಹಾಕಿ ಎಂದು ಸೂಚಿಸಿದರು. ಜೊತೆಗೆ ತಕ್ಷಣವೇ SMS ಕಳುಹಿಸಬೇಕಾದ ನಂಬರ್ ನೀಡಿದ್ದಾರೆ. ಈ ಮೂಲಕ ಊಟ ಮಾಡುವ ವೇಳೆಯಲ್ಲೂ ಸಚಿವರು ಯೋಜನೆಯ ಸೌಲಭ್ಯ ಕಟ್ಟಕಡೆಯ ಮಹಿಳೆಯರಿಗೂ ತಲುಪಬೇಕು ಎನ್ನುವ ಕಾಳಜಿ ತೋರಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read