ಲಾಟರಿಯಲ್ಲಿ ಕೋಟಿಗಟ್ಟಲೆ ಗೆದ್ದ ಸುದ್ದಿಯನ್ನು ಈ ಹಿಂದೆ ಅನೇಕ ಬಾರಿ ನಾವೆಲ್ಲ ಕೇಳಿದ್ದೇವೆ. ಆದರೆ ಅಮೆರಿಕದಲ್ಲಿ ಅದೃಷ್ಟಶಾಲಿಯೊಬ್ಬರು ದಾಖಲೆಯ ಮೊತ್ತದ ಲಾಟರಿಯನ್ನು ಗೆದ್ದಿದ್ದಾರೆ. 1 ಬಿಲಿಯನ್ ಡಾಲರ್ ಅಂದರೆ 8206 ಕೋಟಿ ರೂಪಾಯಿಯನ್ನು ತಮ್ಮದಾಗಿಸಿಕೊಂಡಿದ್ದಾರೆ ಇವರು. ಈ ವ್ಯಕ್ತಿ ಲಾಸ್ ಏಂಜಲೀಸ್ ಮೂಲದವರು. ಲಾಟರಿ ಉದ್ಯಮದಲ್ಲಿ ಬಹು ದೊಡ್ಡ ಹೆಸರು ಮಾಡಿರೋ ಕ್ಯಾಲಿಫೋರ್ನಿಯಾದ ಪವರ್ ಬಾಲ್ನಿಂದ ಈ ಮೊತ್ತ ಬಂದಿದೆ. ಈ ಮೊತ್ತವು ಪವರ್ಬಾಲ್ ಮತ್ತು ಲಾಟರಿ ಇತಿಹಾಸದಲ್ಲಿ ಅತ್ಯಧಿಕ.
ಲಾಸ್ ಏಂಜಲೀಸ್ ಡೌನ್ಟೌನ್ನಲ್ಲಿರುವ ಲಾಸ್ ಪಾಲ್ಮಿಟಾಸ್ ಮಿನಿ ಮಾರ್ಕೆಟ್ನ ವ್ಯಕ್ತಿಯೊಬ್ಬರು ಜುಲೈ 19 ರಂದು ಲಾಟರಿ ಗೆದ್ದಿದ್ದಾರೆ. ಈ ವ್ಯಕ್ತಿಯ ಅದೃಷ್ಟ ಸಂಖ್ಯೆ 7-10-11-13-24 ಮತ್ತು ಪವರ್ಬಾಲ್ ಸಂಖ್ಯೆ 24 ಆಗಿತ್ತು. 292.2 ಮಿಲಿಯನ್ ಜನರಲ್ಲಿ ಒಬ್ಬರು ಈ ಪವರ್ ಬಾಲ್ ಜಾಕ್ಪಾಟ್ ಗೆಲ್ಲುತ್ತಾರೆ. ಪವರ್ಬಾಲ್ ಜಾಕ್ಪಾಟ್ನ ಆರಂಭಿಕ ಅಂಕಿಅಂಶಗಳ ಪ್ರಕಾರ ಅದರ ಮೊತ್ತವು 1 ಬಿಲಿಯನ್ ಡಾಲರ್ ಆಗಿತ್ತು. ಡ್ರಾ ಸಮಯದಲ್ಲಿ ಇದು 1.08 ಶತಕೋಟಿ ಡಾಲರ್ಗೆ ತಲುಪಿದೆ.
ವಿಜೇತರಿಗೆ 4,582 ಕೋಟಿ ರೂಪಾಯಿ ಕೈಗೆ ಸಿಗುತ್ತದೆ. ಪವರ್ಬಾಲ್ ಲಾಟರಿಯ ಇತಿಹಾಸದಲ್ಲಿ ಮೂರನೇ ಬಾರಿಗೆ ಜಾಕ್ಪಾಟ್ ಮೊತ್ತವು 1 ಬಿಲಿಯನ್ ಡಾಲರ್ ಗಡಿ ದಾಟಿದೆ. ಈ ಹಿಂದೆ ನವೆಂಬರ್ 2022ರಲ್ಲಿ 2.04 ಬಿಲಿಯನ್ ಡಾಲರ್ ಅಂದರೆ 16,886 ಕೋಟಿ ರೂಪಾಯಿಯಷ್ಟು ಲಾಟರಿ ಹೊಡೆದಿತ್ತು. ಪವರ್ಬಾಲ್ನ ನಿಯಮಗಳನ್ನು 2015 ರಲ್ಲಿ ಬದಲಾಯಿಸಲಾಗಿದ್ದು, ಜಾಕ್ಪಾಟ್ ಗೆಲ್ಲುವುದು ಅಸಾಮಾನ್ಯವೆನಿಸಿದೆ.