ಬೆಂಗಳೂರು: ವಿಪಕ್ಷ ನಾಯಕರ ಸಭೆಗೆ ಶಿಷ್ಟಾಚಾರ ಉಲ್ಲಂಘಿಸಿ ಸರ್ಕಾರ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿತ್ತು ಎಂಬ ಬಿಜೆಪಿ ಆರೋಪಕ್ಕೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸರ್ಕಾರದ ಪ್ರೊಟೊಕಾಲ್ ಪ್ರಕಾರವೇ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಯಾವ ಶಿಷ್ಟಾಚಾರವನ್ನೂ ಉಲ್ಲಂಘನೆ ಮಾಡಿಲ್ಲ ಎಂದು ಹೇಳಿದರು.
ಈ ಹಿಂದೆ ಕೇಶವ ಕೃಪಾಗೆ ಒಂದು ರಿಸರ್ವ್ ವ್ಯಾನ್ ಹಾಕಿದ್ದರು. ಯಾವ ಆಧಾರದ ಮೇಲೆ ಕೇಶವಕೃಪಾಗೆ ಒಂದು ತುಕಡಿ ಹಾಕಿದ್ರಿ? ಅದೆಲ್ಲಾ ಸ್ಟೇಟ್ ಮೆಂಟ್ ಗಳು ಹೊರಗೆ ಬರಲಿ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.