alex Certify Kiccha Sudeep V/S Kumar : ಗಂಡ ಹೆಂಡತಿ ಜಗಳ ಬೀದಿಗೆ ಬಂದಿದೆ ಎಂದ ನಟ ರವಿಚಂದ್ರನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Kiccha Sudeep V/S Kumar : ಗಂಡ ಹೆಂಡತಿ ಜಗಳ ಬೀದಿಗೆ ಬಂದಿದೆ ಎಂದ ನಟ ರವಿಚಂದ್ರನ್

ಬೆಂಗಳೂರು: ನಟ ಸುದೀಪ್ ಮತ್ತು ನಿರ್ಮಾಪಕ ಎಂ.ಎನ್. ಕುಮಾರ್ ಅವರ ನಡುವಿನ ಜಟಾಪಟಿ ಇನ್ನೂ ಕೂಡ ಮುಗಿಯುವ ಹಂತಕ್ಕೆ ಬಂದಿಲ್ಲ. ಇಂದು ನಿರ್ಮಾಪಕ ಕುಮಾರ್ ನಟ ರವಿಚಂದ್ರನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ನಟ ರವಿಚಂದ್ರನ್ , “ಗಂಡ ಹೆಂಡತಿ ಜಗಳ ಈಗ ಬೀದಿಗೆ ಬಂದಿದೆ” ಎಂದಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಸರಿಯಿಲ್ಲ. ಆಗ ಮನಸ್ಥಿತಿ ಕೂಡ ಸರಿ ಇರಲ್ಲ. ಮೊದಲು ಎಲ್ಲರೂ ಕೂಲ್ ಆಗಬೇಕು, ನಾನು ಯಾರನ್ನು ಮಾತಿನಲ್ಲಿ ನಂಬಲ್ಲ. ನನ್ನ ಮುಂದೆ ದಾಖಲೆ ಇಡಬೇಕು. ದಾಖಲೆ ಕೊಟ್ಟ ಮೇಲೆ ಮಾತುಕತೆ ಏನೆಲ್ಲ ನಡಿದಿದೆ ಅದನ್ನು ತಿಳಿದುಕೊಳ್ಳಬೇಕು. ಈ ಸಮಸ್ಯೆಯನ್ನು ಬಗೆಹರಿಸೋಕೆ ನಾನು ಪ್ರಯತ್ನ ಮಾಡ್ತೀನಿ. ಪರಿಹಾರ ನಾನು ಹುಡುಕೋ ಪ್ರಯತ್ನ ಮಾಡ್ತೀನಿ. ಇವರ ಮಾತುಗಳನ್ನು ಕೇಳಿ ಯಾವ ತೀರ್ಮಾನನು ತಗೋಳೊಕೆ ಆಗಲ್ಲ. ಎಲ್ಲರೂ ನಮ್ಮ ಮನೆಯವರೇ. ಒಬ್ಬರ ಮೇಲೆ ಇನ್ನೊಬ್ಬರು ಟೀಕೆ ಮಾಡೋದು ಬಿಡಬೇಕು. ಈ ಸಮಸ್ಯೆಯನ್ನು ಬಗೆಹರಿಸೋಕೆ ನಾನು ಪ್ರಯತ್ನ ಮಾಡ್ತೀನಿ ಎಂದರು.

ನಿರ್ಮಾಪಕ ಕುಮಾರ್ ಕಿಚ್ಚ ಸುದೀಪ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ನಿನ್ನೆ ನಿರ್ಮಾಪಕ ಕುಮಾರ್ ಅವರು ರಾಜಕುಮಾರ್ ಪ್ರತಿಮೆ ಎದುರು ಧರಣಿ ನಡೆಸಿದ್ದರು.

ನಾನು ಸುದೀಪ್ ಬಗ್ಗೆ ಯಾವತ್ತೂ ಕೆಟ್ಟದಾಗಿ ಮಾತನಾಡಿಲ್ಲ : ಕುಮಾರ್

ಧರಣಿ ಬಳಿಕ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿದ್ದ ಕುಮಾರ್ ‘ ನಾನು ಸುದೀಪ್ ಬಗ್ಗೆ ಯಾವತ್ತೂ ಕೆಟ್ಟದಾಗಿ ಮಾತನಾಡಿಲ್ಲ, ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಷ್ಟೇ ಹೇಳಿದೆ. ಅವರ ಜೊತೆ ರಾಜಿ ಸಂಧಾನಕ್ಕೆ ಕೂಡ ಸಿದ್ದನಿದ್ದೇನೆ ಎಂದರು. ನನ್ನದು ಏನಿದೆ ಅದನ್ಜು ಕ್ಲಿಯರ್ ಮಾಡಿದರೆ ಸಾಕು, ಅವರು ಸಭೆಗೆ ಬರಲಿ ನಾನು ಎಲ್ಲಾ ದಾಖಲೆಗಳನ್ನು ಕೊಡುತ್ತೇನೆ. ರಾಜಿ ಸಂಧಾನಕ್ಕೆ ಅವರು ಕರೆಯಬೇಕಿತ್ತು, ಆದರೆ ನಾವೇ ಕರೆಯತ್ತಿದ್ದೇವೆ ಎಂದರು.
ತಮ್ಮಿಂದ ಸುದೀಪ್ ಹಣ ಪಡೆದುಕೊಂಡು ಸಿನಿಮಾ ಮಾಡಿಕೊಡುತ್ತಿಲ್ಲ ಎಂದು ಕುಮಾರ್ ಆರೋಪ ಮಾಡಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಸುದೀಪ್ ಲೀಗಲ್ ನೋಟಿಸ್ ನೀಡಿದ್ದಲ್ಲದೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಈ ಹಿನ್ನೆಲೆ ನಿರ್ಮಾಪಕ ಕುಮಾರ್ ಧರಣಿ ನಡೆಸಿದ್ದಾರೆ.ನಾನು ನೀಡಿರುವುದು ದೂರು ಅಲ್ಲ ಅದು ಮನವಿಪತ್ರವಷ್ಟೇ, ಯಾವುದೇ ದೂರು ನೀಡಿಲ್ಲ, ಸಮಸ್ಯೆ ಬಗೆಹರಿಸಿಕೊಳ್ಳಲು ಸುದೀಪ್ ಅವರನ್ನು ಹುಡುಕಿಕೊಂಡು ಹೋದರೆ ಅವರು ಇಲ್ಲವೆಂದು ಹೇಳುತ್ತಿದ್ದರು. ಸುದೀಪ್ರ ಮ್ಯಾನೇಜರ್ ನನಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ, ಹಾಗಾಗಿ ನಾನು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿಪತ್ರ ನೀಡಿದೆ” ಎಂದು ಕುಮಾರ್ ಇತ್ತೀಚೆಗೆ ಹೇಳಿದ್ದರು. ಕೋರ್ಟ್ ನೋಟಿಸ್ ಬಂದರೆ ಫಿಲ್ಮ್ ಚೇಂಬರ್ಗೆ ತಂದು ಕೊಡುತ್ತೇನೆ, ವಾಣಿಜ್ಯ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಹೇಳಿದಂತೆ ನಡೆಯುವೆ” ಎಂದಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...