ಹೈದರಾಬಾದ್: ಬ್ಲಡ್ ಬ್ಯಾಂಕ್ ಗೆ ಬರುವ ರಕ್ತವನ್ನು ನಟ ಚಿರಂಜೀವಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಸುಳ್ಳು ಆರೋಪ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ ರಾಜಶೇಖರ್ ಹಾಗೂ ಅವರ ಪತ್ನಿಗೆ ಹೈದರಾಬಾದ್ ನ ನಾಂಪಲ್ಲಿ ಕೋರ್ಟ್ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಚಿರಂಜೀವಿ ಬ್ಲಡ್ ಬ್ಯಾಂಕ್ ಗೆ ಬರುವ ರಕ್ತವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ರಾಜಶೇಖರ್ ಆರೋಪಿಸಿದ್ದರು. ರಾಜಶೇಖರ್ ಆರೋಪಕ್ಕೆ ಚಿರಂಜೀವಿ ಭಾವ ಅಲ್ಲು ಅರವಿಂದ್ ಮಾನನಷ್ಟ ಮೊಕದ್ದಮೆ ಹೂಡಿ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ರಾಜಶೇಖರ್ ಹಾಗೂ ಪತ್ನಿ ಜೀವಿತಾಗೆ ಒಂದು ವರ್ಷ ಜೈಲುಶಿಕ್ಷೆ ಹಾಗೂ 5 ಲಕ್ಷ ದಂಡ ವಿಧಿಸಿದೆ.
ರಾಜಶೇಖರ್ ಹಾಗು ಜೀವಿತಾ 2018ರಲ್ಲಿ ಚಿರಂಜೀವಿ ವಿರುದ್ಧ ಆರೋಪ ಮಾಡಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್, ಇದೀಗ ಆರೋಪಿಗಳಿಗೆ 1 ವರ್ಷ ಜೈಲುಶಿಕ್ಷೆ ವಿಧಿಸಿದೆ. ಸಧ್ಯ ರಾಜಶೇಖರ್ ಹಾಗೂ ಜೀವಿತಾ ಇಬ್ಬರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.