alex Certify ರಾಜಕೀಯ ಎಂಟ್ರಿಗೆ ಸಿದ್ಧರಾದ ನಟ ವಿಜಯ್​ : ಡಿಎಂಕೆ, ಎಐಡಿಎಂಕೆಗೆ ನಡುಕ ಹುಟ್ಟಿಸಿದ ʼದಳಪತಿʼ ತಯಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಕೀಯ ಎಂಟ್ರಿಗೆ ಸಿದ್ಧರಾದ ನಟ ವಿಜಯ್​ : ಡಿಎಂಕೆ, ಎಐಡಿಎಂಕೆಗೆ ನಡುಕ ಹುಟ್ಟಿಸಿದ ʼದಳಪತಿʼ ತಯಾರಿ

ದಶಕಗಳಿಂದಲೂ ರಾಜಕೀಯ ಮತ್ತು ಸಿನಿಮಾ ಜಗತ್ತನ್ನು ಬೇರ್ಪಡಿಸಲಾಗದ ರಾಜ್ಯವಂದ್ರೆ ಅದು ತಮಿಳುನಾಡು. ಇದೀಗ ತಮಿಳುನಾಡಿನಲ್ಲಿ ಶೀಘ್ರದಲ್ಲೇ ಮತ್ತೊಬ್ಬ ಜನಪ್ರಿಯ ನಟ ರಾಜಕೀಯ ರಂಗಕ್ಕೆ ಇಳಿಯುವ ಮುನ್ಸೂಚನೆ ಕಂಡು ಬಂದಿದೆ.

49 ವರ್ಷ ವಯಸ್ಸಿನ ವಿಜಯ್ ತಮಿಳು ಸಿನಿಮಾ ಜಗತ್ತಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು ಹಾಗೂ ಸಾಕಷ್ಟು ಜನಪ್ರಿಯತೆ ಗಳಿಸಿರುವ ನಟರು ಹೌದು. ಇವರು 2026 ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.

ಹತ್ತಾರು ವರ್ಷಗಳಿಂದ ಒಟ್ಟಿಗಿದ್ದ ತಮ್ಮ ಹಿರಿಯರಾದ ರಜನೀಕಾಂತ್ ಅವರಿಗಿಂತ ವಿಜಯ್ ಭಿನ್ನವಾಗಿ ರಾಜಕೀಯ ಎಂಟ್ರಿಗೆ ಯೋಚಿಸಿದ್ದಾರೆ. ಇದಕ್ಕಾಗಿ ದಳಪತಿ ವಿಜಯ್ ತಮ್ಮ ಅಭಿಮಾನಿಗಳ ಸಂಘವಾದ ‘ವಿಜಯ್ ಮಕ್ಕಳ್ ಇಯಕ್ಕಂ’ ಅನ್ನು ತಮ್ಮ 234 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಜೆಯ ಟ್ಯೂಷನ್ ಸೆಂಟರ್‌ಗಳಾಗಿ ಪ್ರಾರಂಭಿಸಲು ಸೂಚನೆ ನೀಡಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಅಡಿಪಾಯ ಹಾಕುತ್ತಿರುವುದಾಗಿ ಮಾಹಿತಿ ಲಭಿಸಿದೆ.

ರಾಜ್ಯದ ಎಲ್ಲಾ 234 ಅಸೆಂಬ್ಲಿ ಕ್ಷೇತ್ರಗಳಲ್ಲಿ ದ್ವೀತಿಯ ಪರೀಕ್ಷೆಗಳಲ್ಲಿ ಟಾಪರ್‌ ಆಗಿರುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಗಿತ್ತು. ಇದೀಗ ವಿಜಯ್ ಮಕ್ಕಳ್ ಇಯಕ್ಕಂ ಹೆಸರಿನಲ್ಲಿ ಟ್ಯೂಷನ್ ಸೆಂಟರ್ ಆರಂಭಕ್ಕೆ ಸಿದ್ದತೆಗಳು ನಡೆದಿವೆ ಎನ್ನಲಾಗಿದೆ. ಇದು ವಿಜಯ್ ಅವರ ರಾಜಕೀಯ ಪ್ರವೇಶಕ್ಕೆ ಅಡಿಪಾಯವನ್ನು ಸಿದ್ಧಪಡಿಸುತ್ತಿರುವುದಾಗಿ ಮೂಲಗಳು ತಿಳಿಸಿದ್ದು, ಇದನ್ನು 2024 ರ ಲೋಕಸಭೆ ಚುನಾವಣೆಯ ನಂತರ ಘೋಷಿಸುವ ಸಾಧ್ಯತೆಯಿದೆ.

ವಿಜಯ್ ಅವರು ತಮ್ಮ ಅಭಿಮಾನಿ ಸಂಘ ಗಳಿಸಿದ ಅಭಿಮಾನವನ್ನು ತಮ್ಮ ರಾಜಕೀಯ ಪಕ್ಷಕ್ಕೆ ಮತವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಇದನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಸ್ಪಷ್ಟವಾದ ಪ್ಲ್ಯಾನ್ ಸಹ ರೆಡಿಯಾಗಿದೆ ಎಂದು ಮೂಲವೊಂದು ತಿಳಿಸಿದೆ. ವಿಜಯ್ ಅವರ ರಾಜಕೀಯ ಪ್ರವೇಶವು ತಮಿಳುನಾಡಿನಲ್ಲಿ ಪರ್ಯಾಯ ರಾಜಕೀಯ ಪಕ್ಷವೊಂದರ ಹುಟ್ಟಿಗೆ ಕಾರಣವಾಗುತ್ತದೆ. ಜೊತೆಗೆ ಜನಪ್ರತಿನಿಧಿಗಳ ಆಯ್ಕೆ ವಿಚಾರದಲ್ಲಿ ಜಾಗೃತಿ ಮೂಡಿಸಲು ಕಾರಣವಾಗುತ್ತೆ ಎಂದು ಎನ್.ಟಿ.ಕೆ ಮುಖ್ಯಸ್ಥ ಸೀಮಾನ್ ಅಭಿಪ್ರಾಯಪಟ್ಟಿದ್ದಾರೆ. ವಿಜಯ್ ಅವರು ರಾಜಕೀಯಕ್ಕೆ ಬರಬೇಕು ಎಂದು ಸೀಮಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಿವಂಗತ ಎಂ ಜಿ ರಾಮಚಂದ್ರನ್ ಮತ್ತು ಜೆ ಜಯಲಲಿತಾ ಅವರು ರಾಜಕೀಯದಲ್ಲಿ ಇತಿಹಾಸವನ್ನೇ ಸೃಷ್ಟಿ ಮಾಡಿದ್ರು. ಅಂದ್ರೆ ನಂತ್ರ ಬಂದ ವಿಜಯಕಾಂತ್ ಮತ್ತು ಕಮಲ್ ಹಾಸನ್ ಸಿನಿಮಾದಲ್ಲಿ ಸೃಷ್ಟಿಸಿದ ಇತಿಹಾಸವನ್ನು ರಾಜಕೀಯದಲ್ಲಿ ಸೃಷ್ಟಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದ್ರೆ ವಿಜಯ್ ಕಳೆದ ಕೆಲವು ವರ್ಷಗಳಿಂದ ತಮ್ಮ ರಾಜಕೀಯ ಪ್ರವೇಶದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದ್ದಾರೆ. ತಮ್ಮ ಚಲನಚಿತ್ರಗಳ ಆಡಿಯೊ ಬಿಡುಗಡೆ ಕಾರ್ಯಕ್ರಮಗಳಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡುವ ಮೂಲಕ ಎಲ್ಲರ ಗಮನ ಸೆಳೆದರು. ಇದರ ಜೊತೆ ತಮ್ಮ ಅಭಿಮಾನಿಗಳಿಗೆ 2021 ಮತ್ತು 2022 ರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸೋದಕ್ಕೂ ಅವಕಾಶ ಮಾಡಿಕೊಟ್ಟರು.

2022 ರಲ್ಲಿ ತಮ್ಮ ಚಿತ್ರ ಮೃಗ ಬಿಡುಗಡೆಯಾಗುವ ಸಂದರ್ಭದಲ್ಲಿ, ರಾಜಕೀಯಕ್ಕೆ ಬರುವುದನ್ನು ನನ್ನ ಅಭಿಮಾನಿಗಳು ನಿರ್ಧರಿಸುತ್ತಾರೆ ಎಂದು ಹೇಳಿದ್ದರು. ಈ 30 ವರ್ಷಗಳಲ್ಲಿ ನನ್ನನ್ನು ಸಾಮಾನ್ಯ ನಟನಿಂದ ದಳಪತಿಯನ್ನಾಗಿ ಮಾಡಿದ್ದು ಅಭಿಮಾನಿಗಳು. ಇದನ್ನು ಸಹ ಅಭಿಮಾನಿಗಳು ನಿರ್ಧರಿಸಬೇಕು ಎಂದು ಹೇಳಿದ್ದರು. ನೀವು ನನ್ನನ್ನು ಕೇಳಿದರೆ, ನಾನು ವಿಜಯ್ ಆಗಲು ಇಷ್ಟಪಡುತ್ತೇನೆ. ಆದರೆ ಅಭಿಮಾನಿಗಳು ಮತ್ತು ಸಂದರ್ಭಗಳ ಮೇಲೆ ನಿರ್ಧರಿತವಾಗಿರುತ್ತೆ ಎಂದು ಹೇಳಿದ್ದರು.

ವಿಜಯ್ ಅವರು ರಾಜಕೀಯ ಘೋಷಣೆಯ ನಂತರ ಸಿನಿಮಾಗಳಿಗೆ ಬ್ರೇಕ್ ನೀಡುವ ಸಾಧ್ಯತೆಯು ಇದೆ ಎಂದು ಮೂಲಗಳು ತಿಳಿಸಿದೆ. ಯಾಕಂದ್ರೆ ಫುಲ್ ಟೈಮ್‌ ಆಗಿ ರಾಜಕೀಯದಲ್ಲಿ, ಜನರ ಜೊತೆ ಬೆರೆತಾಗ ಮಾತ್ರ ರಾಜಕೀಯದಲ್ಲಿ ಯಶಸ್ವಿಯಾಗೋದಕ್ಕೆ ಸಾಧ್ಯ ಎಂಬುದನ್ನು ವಿಜಯ್ ಅಂದುಕೊಂಡಿದ್ದಾರೆ.

ಆದ್ರೆ ವಿಜಯ್ ಈ ಬ್ರೇಕ್ ತೆಗೆದುಕೊಂಡರೆ, ರಾಜಕೀಯದಲ್ಲಿದ್ದರೂ ನಟರು ಚಲನಚಿತ್ರಗಳಲ್ಲಿ ನಟಿಸುವುದನ್ನು ಮುಂದುವರೆಸುವ ದೀರ್ಘಕಾಲದ ಸಂಪ್ರದಾಯವನ್ನು ಮುರಿದಂತಾಗುತ್ತದೆ. ಯಾಕಂದ್ರೆ ಎಂ.ಜಿ.ಆರ್ ಅವರು ತಮ್ಮ ಹಿಂದಿನ ಒಪ್ಪಂದಗಳನ್ನು ಮುರಿಯಬಾರದು ಎಂಬ ಕಾರಣಕ್ಕಾಗಿ ತಮ್ಮ ಪ್ರಮಾಣವಚನವನ್ನು ಒಂದು ವಾರ ಮುಂದೂಡಿದ್ರು. ಆದರೆ ಕಮಲ್ ಹಾಸನ್ ಚಲನಚಿತ್ರಗಳಲ್ಲಿ ನಟಿಸುವುದನ್ನು ಮುಂದುವರೆಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...