alex Certify NCB ವಶಪಡಿಸಿಕೊಂಡ 2,400 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ; ಗೃಹಸಚಿವ ಅಮಿತ್ ಶಾ ಮೇಲ್ವಿಚಾರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

NCB ವಶಪಡಿಸಿಕೊಂಡ 2,400 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ; ಗೃಹಸಚಿವ ಅಮಿತ್ ಶಾ ಮೇಲ್ವಿಚಾರಣೆ

Drugs Worth Rs 2,400 Crore Destroyed, Amit Shah Watches Virtually ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಎಲ್ಲಾ ರಾಜ್ಯಗಳ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಗಳ (ಎಎನ್‌ಟಿಎಫ್) ಸಮನ್ವಯದಲ್ಲಿ ಇಂದು ದೇಶದ ವಿವಿಧ ಭಾಗಗಳಲ್ಲಿ 2,400 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ನಾಶಪಡಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡ್ರಗ್ಸ್ ನಾಶವನ್ನು ವರ್ಚುಯಲ್ ಆಗಿ ಇದರ ಮೇಲ್ವಿಚಾರಣೆ ಮಾಡಿದರು. ನವದೆಹಲಿಯಲ್ಲಿ ಇಂದು ಜರುಗಿದ “ಡ್ರಗ್ಸ್ ಟ್ರಾಫಿಕಿಂಗ್ ಮತ್ತು ರಾಷ್ಟ್ರೀಯ ಭದ್ರತೆ” ಕುರಿತು ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ, ಡ್ರಗ್ಸ್ ನಾಶ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡಿದರು. ಇದರಲ್ಲಿ ಅಂದಾಜು 2,416 ಕೋಟಿ ರೂ. ಮೌಲ್ಯದ 1,44,000 ಕೆಜಿ ಡ್ರಗ್ಸ್ ನ ನಾಶ ಮಾಡಲಾಗಿದೆ.

ಕಾರ್ಯಾಚರಣೆಯಲ್ಲಿ ಎನ್‌ಸಿಬಿ ಹೈದರಾಬಾದ್ ಘಟಕ ವಶಪಡಿಸಿಕೊಂಡ 6,590 ಕೆಜಿ, ಇಂದೋರ್ ಘಟಕ ವಶಪಡಿಸಿಕೊಂಡ 822 ಕೆಜಿ ಮತ್ತು ಜಮ್ಮು ಘಟಕ ವಶಪಡಿಸಿಕೊಂಡ 356 ಕೆಜಿ ಡ್ರಗ್ಸ್ ಸೇರಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ಅಸ್ಸಾಂನಲ್ಲಿ 1,486 ಕೆಜಿ, ಚಂಡೀಗಢದಲ್ಲಿ 229 ಕೆಜಿ, ಗೋವಾದಲ್ಲಿ 25 ಕೆಜಿ, ಗುಜರಾತ್‌ನಲ್ಲಿ 4,277 ಕೆಜಿ, ಹರಿಯಾಣದಲ್ಲಿ 2,458 ಕೆಜಿ, ಜಮ್ಮು ಮತ್ತು ಕಾಶ್ಮೀರದಲ್ಲಿ 4,069 ಕೆಜಿ, ಮಧ್ಯಪ್ರದೇಶದಲ್ಲಿ 1,03,884 ಕೆಜಿ, 159 ಮಹಾರಾಷ್ಟ್ರದಲ್ಲಿ ಕೆಜಿ, ತ್ರಿಪುರಾದಲ್ಲಿ 1,803 ಕೆಜಿ, ಉತ್ತರ ಪ್ರದೇಶದಲ್ಲಿ 4,049 ಕೆಜಿ ಡ್ರಗ್ಸ್ ನಾಶವಾಗಿದೆ.

ಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಮಾದಕ ವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣು ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಎನ್ ಸಿ ಬಿ ಹೇಳಿಕೆಯಲ್ಲಿ ತಿಳಿಸಿದೆ.

ಜೂನ್ 1, 2022 ರಿಂದ ಜುಲೈ 15, 2023 ರವರೆಗೆ NCB ಯ ಎಲ್ಲಾ ಪ್ರಾದೇಶಿಕ ಘಟಕಗಳು ಮತ್ತು ರಾಜ್ಯ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಗಳು ವಶಪಡಿಸಿಕೊಂಡ ಅಂದಾಜು 9,580 ಕೋಟಿ ರೂ. ಮೌಲ್ಯದ 8,76,554 ಕೆಜಿ ಡ್ರಗ್‌ಗಳನ್ನು ನಾಶಪಡಿಸಿವೆ. ಇದು ನಿಗದಿತ ಗುರಿಗಿಂತ 11 ಪಟ್ಟು ಹೆಚ್ಚು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...