ರೆನಾಲ್ಟ್ ಕಾರ್ ಖರೀದಿದಾರರಿಗೆ ಬಂಪರ್ ಆಫರ್; ಗರಿಷ್ಠ 77,000 ರೂ. ವರೆಗೆ ʼಡಿಸ್ಕೌಂಟ್ʼ

Renault launches SUV Kiger at ₹5.45 lakh in India: Details here | Mint #AskBetterQuestionsಕಾರ್ ಖರೀದಿದಾರರಿಗೆ ಸಿಹಿಸುದ್ದಿ. ರೆನಾಲ್ಟ್ ಕಂಪನಿ ತನ್ನ ಎಲ್ಲಾ ಮಾದರಿಯ ಕಾರ್ ಗಳ ಮೇಲೆ ರಿಯಾಯಿತಿ ಘೋಷಿಸಿದ್ದು ಗ್ರಾಹಕರು 77 ಸಾವಿರ ರೂಪಾಯಿವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಈ ಆಫರ್ ಜುಲೈ 31ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ.

ಕಾರ್ ಖರೀದಿಯಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್ಚೇಂಜ್ ಬೋನಸ್, ಕಾರ್ಪೊರೇಟ್ ರೇಟ್ ರಿಯಾಯಿತಿ ಹಾಗು ಲಾಯಲ್ಟಿ ಬೋನಸ್ ಸೇರಿವೆ. ಕ್ವಿಡ್, ಕಿಗರ್‌, ಟ್ರೈಬರ್ ನ ಮೂರು ಮಾದರಿಗಳಲ್ಲಿ ಗ್ರಾಮೀಣ ಮತ್ತು ಸ್ಕ್ರ್ಯಾಪೇಜ್ ರಿಯಾಯಿತಿಗಳಂತಹ ಪ್ರಯೋಜನಗಳನ್ನು ಸಹ ನೀಡಲಾಗುತ್ತಿದೆ. ಹಾಗಾದರೆ ಮಾಡೆಲ್ ವಾರು ಆಫರ್ ವಿವರಗಳೆಷ್ಟಿದೆ ಅತ ನೋಡಿದ್ರೆ,

ರೆನಾಲ್ಟ್ ಕ್ವಿಡ್ ಕಾರ್

ರೆನಾಲ್ಟ್ ಕ್ವಿಡ್ ಕಾರು ಖರೀದಿ ವೇಳೆ ಒಟ್ಟು 57,000 ರೂಪಾಯಿಯವರೆಗೆ ರಿಯಾಯಿತಿ ಪ್ರಯೋಜನ ಸಿಗಲಿದೆ. ಅದರಲ್ಲಿ 15000 ವರೆಗೆ ನಗದು ರಿಯಾಯಿತಿ, 20,000 ರೂಪಾಯಿಯವರೆಗೆ ಎಕ್ಸ್ಚೇಂಜ್ ಬೋನಸ್‌, 12000 ರೂಪಾಯಿಯವರೆಗೆ ಕಾರ್ಪೊರೇಟ್ ಡಿಸ್ಕೌಂಟ್ ಹಾಗು 10000 ರೂಪಾಯಿ ಲಾಯಲ್ಟಿ ಬೋನಸ್ ಸೇರಿದೆ. ರೆನಾಲ್ಟ್ ಕ್ವಿಡ್ ಅನ್ನು ರೂ.4.70 ಲಕ್ಷ ರೂಪಾಯಿಯಿಂದ.6.33 ಲಕ್ಷ ರೂ.ವರೆಗೆಗೆ ಮಾರಾಟ ಮಾಡಲಾಗುತ್ತಿದೆ.

ರೆನಾಲ್ಟ್ ಟ್ರೈಬರ್ ಕಾರು‌

ರೆನಾಲ್ಟ್ ಟ್ರೈಬರ್ ಕಾರ್ ಗೆ 52 ಸಾವಿರ ರೂಪಾಯಿವರೆಗೆ ರಿಯಾಯಿತಿ ಸಿಗಲಿದೆ. 15,000 ನಗದು ರಿಯಾಯಿತಿ, 12,000 ರೂಪಾಯಿಯವರೆಗೆ ಕಾರ್ಪೊರೇಟ್ ಡಿಸ್ಕೌಂಟ್, 25,000 ರೂಪಾಯಿಯ ಎಕ್ಸ್ಚೇಂಜ್ ಬೋನಸ್ ಒಳಗೊಂಡು 52000 ರೂ. ರಿಯಾಯಿತಿ ಪ್ರಯೋಜನ ಪಡೆಯಬಹುದು. ಭಾರತದಲ್ಲಿ ರೆನಾಲ್ಟ್ ಟ್ರೈಬರ್ ಬೆಲೆ 6.33 ಲಕ್ಷದಿಂದ 8.97 ಲಕ್ಷ ರೂ. ಇದೆ.

ರೆನಾಲ್ಟ್ ಕಿಗರ್ ಕಾರ್

ರೆನಾಲ್ಟ್ ಕಿಗರ್ ಗೆ ಗರಿಷ್ಠ 20,000 ರೂ. ಲಾಯಲ್ಟಿ ಬೋನಸ್‌, 25,000 ರೂಪಾಯಿಗಳ ನಗದು ರಿಯಾಯಿತಿ , ಗರಿಷ್ಠ 25 ಸಾವಿರ ರೂ.ವರೆಗೆ ಎಕ್ಸ್ ಚೇಂಜ್ ಬೋನಸ್, 12 ಸಾವಿರ ರೂ. ಕಾರ್ಪೊರೇಟ್ ಡಿಸ್ಕೌಂಟ್ ಸೇರಿ ಕನಿಷ್ಠ 62 ಸಾವಿರ ರೂ. ನಿಂದ 77 ಸಾವಿರ ರೂಪಾಯಿವರೆಗೆ ರಿಯಾಯಿತಿ ಪಡೆಯಬಹುದು. ಕಿಗರ್ ಬೆಲೆ 6.50 ಲಕ್ಷ ರೂ.ನಿಂದ 11.23 ಲಕ್ಷ ರೂ.ವರೆಗೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read