UPSC ಪರೀಕ್ಷೆ ಪಾಸ್ ಮಾಡಬೇಕೆಂಬುದು ಲಕ್ಷಾಂತರ ಜನರ ಕನಸಾಗಿರುತ್ತದೆ. ಆದರೆ ಈ ಕನಸು ಸುಲಭವಾಗಿ ನನಸಾಗುವುದಿಲ್ಲ. ಕಠಿಣ ಪರಿಶ್ರಮ, ಅಧ್ಯಯನ, ಸಮರ್ಪಣೆಯಿಂದ ಮಾತ್ರ ಸಾಧ್ಯವಾಗುತ್ತದೆ. ಅಂತಹ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ್ಲೇ ದಿವ್ಯಾ ತನ್ವರ್ ಅವರು ಕೇವಲ 21 ವರ್ಷ ವಯಸ್ಸಿನಲ್ಲೇ UPSC ಪಾಸ್ ಮಾಡಿದ್ದರು.
ಹರಿಯಾಣ ಮೂಲದ ದಿವ್ಯಾ ತನ್ವಾರ್ ಅವರು 2021 ರಲ್ಲಿ UPSC ಪರೀಕ್ಷೆಗೆ ಹಾಜರಾಗಿದ್ದರು. 438 ರ ಅಖಿಲ ಭಾರತ ಶ್ರೇಣಿಯೊಂದಿಗೆ ತಮ್ಮ ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಪರೀಕ್ಷೆಯಲ್ಲಿ ತೇರ್ಗಡೆಯಾದಾಗ ದಿವ್ಯಾ ಕೇವಲ 21 ವರ್ಷ ವಯಸ್ಸಿನವರಾಗಿದ್ದರು. ಯಾವುದೇ ತರಬೇತಿಯನ್ನು ತೆಗೆದುಕೊಳ್ಳದೇ ತಮ್ಮ ಸ್ವಂತ ಪ್ರಯತ್ನದಿಂದ ಅವರು ಪಾಸ್ ಆಗಿದ್ದರು. ಆದರೆ ಒಮ್ಮೆ UPSC ಪಾಸ್ ಮಾಡಿದೆ ಎಂದು ಅವರು ಸುಮ್ಮನೇ ಇರಲಿಲ್ಲ. ಮತ್ತೆ 2022 ರಲ್ಲಿ 22 ನೇ ವಯಸ್ಸಿನಲ್ಲಿ UPSC ಪರೀಕ್ಷೆ ಎದುರಿಸಿ 105 ನೇ ಶ್ರೇಣಿಯಲ್ಲಿ ಪಾಸ್ ಆದರು.
ದಿವ್ಯಾ ತನ್ವಾರ್ ಯಾವಾಗಲೂ ಉತ್ತಮ ವಿದ್ಯಾರ್ಥಿನಿಯಾಗಿದ್ದರು. ಮಹೇಂದ್ರಗಢದ ದಿವ್ಯಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ತನ್ನೂರಿನ ಸರ್ಕಾರಿ ಶಾಲೆಗಳಲ್ಲಿ ಮುಗಿಸಿದರು. ನಂತರ ಮಹೇಂದ್ರಗಢದ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದರು. ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. ಪದವಿಯ ನಂತರ ಅವರು ತಮ್ಮ UPSC ಸಿದ್ಧತೆಗಳನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಗಳು ತೀರಾ ಹದಗೆಟ್ಟಿದ್ದರೂ ತಾಯಿ ಆವರ ಆಕಾಂಕ್ಷೆಗಳಿಗೆ ಬೆಂಬಲವಾಗಿ ನಿಂತರು.
IAS ದಿವ್ಯಾ ತನ್ವಾರ್ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಅನುಯಾಯಿಗಳು ಮತ್ತು ಸ್ನೇಹಿತರೊಂದಿಗೆ ಸ್ಪೂರ್ತಿದಾಯಕ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಪ್ರಸ್ತುತ ಐಎಎಸ್ ಅಧಿಕಾರಿ ದಿವ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ 90 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.