ಪ್ರವಾಸಿಗರ ಗಮನಕ್ಕೆ : ದೂದ್ ಸಾಗರ ಬಳಿ ಗುಡ್ಡ ಕುಸಿತ , ಪ್ರವೇಶ ನಿರ್ಬಂಧ

ಬೆಳಗಾವಿ : ಧಾರಾಕಾರ ಮಳೆಗೆ ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ದೂದ್ ಸಾಗರ್ ಬಳಿ ಗುಡ್ಡ ಕುಸಿದಿದ್ದು, ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ನಿನ್ನೆ ಸಂಜೆ ವೇಳೆಗೆ ಬಂಡೆ ಕುಸಿದ ಪರಿಣಾಮ 4 ಗಂಟೆಗಳ ಕಾಲ ಬೆಳಗಾವಿ-ಗೋವಾ ರೈಲ್ವೆ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ನಂತರ ಅಗ್ನಿಶಾಮಕ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸರು ಮಣ್ಣು, ಬಂಡೆ ತೆರವು ಮಾಡಿದರು. ನಂತರ ರೈಲುಗಳ ಸಂಚಾರ ಪುನಾರಂಭವಾಯಿತು.

ಭಾನುವಾರ ದೂದ್ ಸಾಗರ್ ಜಲಪಾತ ವೀಕ್ಷಣೆಗೆ ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ತೆರಳಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಮಳೆಗಾಲಯದಲ್ಲಿ ಅಪಾಯ ಹೆಚ್ಚಿರುವ ಹಿನ್ನೆಲೆ ದೂಧ್ ಸಾಗರ್ಗೆ ತೆರಳದಂತೆ ಗೋವಾ ಸರ್ಕಾರ ಪ್ರವಾಸಿಗರಿಗೆ ಸೂಚನೆ ನೀಡಿದೆ. ಸದ್ಯ ಸ್ಥಳದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read