ಉಡುಪಿ : ಭಾರತೀಯ ಸೇನೆಯ ಅಗ್ನಿಪಥ್ ಸೇನಾ ನೇಮಕಾತಿ ರ್ಯಾಲಿಯು ಜುಲೈ 17 ರಿಂದ 25 ರವರೆಗೆ ಅಜ್ಜರಕಾಡು ಸ್ಟೇಡಿಯಂನಲ್ಲಿ ನಡೆಯಲಿದ್ದು, ಸದರಿ ರ್ಯಾಲಿಗೆ ಆಗಮಿಸುವ ಅಭ್ಯರ್ಥಿಗಳಿಗೆ ಈ ಕೆಳಕಂಡ ಸ್ಥಳಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದ್ದು ಅಭ್ಯರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರಿದೆ.
ಗೋವಿಂದ ಕಲ್ಯಾಣ ಮಂಟಪ ಅಜ್ಜರಕಾಡು ವಾರ್ಡಿನ ಭುಜಂಗ ಪಾರ್ಕನ ಹತ್ತಿರ ದೂ.ಸಂಖ್ಯೆ:-8660793549, ಅಂಬೇಡ್ಕ್ರ್ ಭವನ, ಆದಿಉಡುಪಿ – ದೂ.ಸಂಖ್ಯೆ:-9480843209,ನಾರಾಯಣಗುರು ಸಭಾ ಭವನ -ಬನ್ನಂಜೆ, ಕೆ.ಎಸ್.ಆರ್.ಟಿ.ಸಿ.ಬಸ್ ಸ್ಟಾಂಡ್ ಹತ್ತಿರ – ದೂ.ಸಂಖ್ಯೆ:-9481518767, ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪ (ಸಭಾ ಭವನ) ಅಂಬಲಪಾಡಿ – ದೂ.ಸಂಖ್ಯೆ-9742338533
ರ್ಯಾಲಿಗೆ ಆಗಮಿಸುವ ಅಭ್ಯರ್ಥಿಗಳು ಸಭಾ ಭವನದಲ್ಲಿ , ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆಯನ್ನು ಕಾಪಾಡತಕ್ಕದ್ದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ವಾಸ್ತವ್ಯ ಹೂಡಬಾರದು. ಹೆಚ್ಚಿನ ಮಾಹಿತಿಗಾಗಿ 8296840456, 9148532284 ಮತ್ತು 9535052544 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವAತೆ ಉಡುಪಿ ನಗರಸಭೆಯ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.