ಮಲೆನಾಡು ಹಾಗೂ ತುಳು ನಾಡಿನಲ್ಲಿ ಇಂದು ( ಜು.17) ಆಟಿ ಅಮವಾಸ್ಯೆಯ ಸಂಭ್ರಮ ಇಂದು ಕರ್ನಾಟಕದ ಹಲವು ಭಾಗಗಳಲ್ಲಿ ಭೀಮನ ಅಮಾವಾಸ್ಯೆ ಆಚರಿಸಲಾಗುತ್ತದೆ. ಇದೇ ದಿನ ಕರಾವಳಿ ಅಥವಾ ತುಳುನಾಡು ಭಾಗದಲ್ಲಿ ಆಟಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ.
ಈ ತಿಂಗಳಲ್ಲಿ ಯಾವುದೇ ಶುಭಕಾರ್ಯಗಳು, ಪೂಜಾ ಕಾರ್ಯಗಳಿಗೆ ನಿಷಿದ್ಧಹೇರಲಾಗುತ್ತದೆ. ಇನ್ನೂ, ಆಟಿ ಅಮಾವಾಸ್ಯೆಯ ವಿಶೇಷ ಅಂದರೆ ಈ ಹಬ್ಬದಂದು ಖಾಲಿಹೊಟ್ಟೆಯಲ್ಲಿ ಜನರು ಪಾಲೆ ಮರದ ಕಷಾಯ ಸೇವಿಸುತ್ತಾರೆ. ಪಾಲೆ ಮರವು ಒಂದು ರೀತಿಯಲ್ಲಿ ಹಾಲಿನ ರೂಪದಲ್ಲಿ ರಸ ಕೊಡುವ ಮರವಾಗಿದೆ. ಇದರಿಂದ ತಯಾರಿಸಯವ ಕಹಿಯಾದ ಖಷಾಯವನ್ನು ಸೇವಿಸುತ್ತಾರೆ.
ಸಪ್ತಪರ್ಣಿ ಮರ ಎಂದು ಕರೆಯುವ ಈ ಮರದ ತೊಗಟೆಯಿಂದ ಮಾಡುವ ಕಷಾಯ ಸರ್ವರೋಗಗಳಿಗೆ ರಾಮಭಾಣ ಎಂದು ಹಿರಿಯರು ಹೇಳಿದ್ದಾರೆ. ಹಿಂದಿನ ಕಾಲದಿಂದಲೂ ಆಟಿ ಅಮಾವಾಸ್ಯೆ ದಿನದಂದು ಈ ಮರದ ಕಷಾಯ ಸೇವಿಸುವ ಪದ್ದತಿ ಬೆಳೆದುಕೊಂಡು ಬಂದಿದೆ. ಈ ಸಮಯದಲ್ಲಿ ರೋಗ ಬಾಧಿಸುವ ಸಾಧ್ಯತೆ ಹೆಚ್ಚಿರುವುದರಿಂದ ಈ ಕಷಾಯ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಆಟಿ ಅಮಾವಾಸ್ಯೆಯ ದಿನ ಹಾಳೆ ಮರದ ತೊಗಟೆಯ ತುಂಬಾ ಸಕಲ ರೋಗಕ್ಕೂ ರಾಮಬಾಣವಾಗಬಲ್ಲ ಆಯುರ್ವೇಧದ ಶಕ್ತಿಯನ್ನು ಮೈಗೂಡಿಸಿ ಕೊಂಡಿರುತ್ತದೆಯಂತೆ. ಒಂದು ವರ್ಷಗಳ ಕಾಲ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸಮತೋಲನದಲ್ಲಿ ಇಡುವ ಶಕ್ತಿ ಈ ಕಷಾಯಕ್ಕೆ ಇದೆಯಂತೆಈ ಕಷಾಯ ತುಂಬಾ ಕಹಿ ಇರುವುದರಿಂದ, ಇದನ್ನು ಕುಡಿದ ಬಳಿಕ ಸ್ವಲ್ಪ ಬೆಲ್ಲ ಸೇವಿಸುತ್ತಾರೆ. ಈ ಕಷಾಯ ದೇಹಕ್ಕೆ ತುಂಬಾ ಉಷ್ಣವಾದ್ದರಿಂದ, ನಂತರ ಮೆಂತ್ಯೆ ಗಂಜಿ ಸೇವಿಸುವುದು ವಾಡಿಕೆಯಾಗಿದೆ. ಸೂರ್ಯೋದಯಕ್ಕೆ ಮುಂಚೆ ಎದ್ದು ಕಲ್ಲಿನಿಂದ ಪಾಲೆ ಮರದ ಕೆತ್ತೆಯನ್ನು ಕೆತ್ತಿ ತಂದು ಕಷಾಯ ಮಾಡಿ ಕುಡಿಯುವುದು ಅನಾದಿ ಕಾಲದಿಂದಲೂ ನಡೆದು ಬಂದ ಆಚರಣೆಯಾಗಿದೆ.