ಒಂದು ಸ್ಮಾರ್ಟ್ಫೋನ್ ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದರೆ ಬ್ಯಾಟರಿಯ ಕಾರ್ಯದಕ್ಷತೆ ಸರಿಯಾಗಿ ಇರುವುದು ತುಂಬಾನೇ ಮುಖ್ಯ. ಡಿಸ್ಪ್ಲೇ ಅಥವಾ ಪ್ರೊಸೆಸರ್ಗಳಷ್ಟೇ ಬ್ಯಾಟರಿ ಕೂಡ ಮಹತ್ವ ಪಡೆದಿದೆ. ಆದರೆ ನೀವು ಕೊಂಚ ಎಡವಿದರೂ ಸಹ ಬ್ಯಾಟರಿ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಂಡು ಬಿಡುತ್ತದೆ. ಹೀಗಾಗಿ ಬ್ಯಾಟರಿ ಸರಿಯಾಗಿ ಕೆಲಸ ಮಾಡಬೇಕು ಎಂದರೆ ನೀವು ಕೆಲವೊಂದು ಸಲಹೆಗಳನ್ನು ಪಾಲಿಸಬೇಕು.
80 ಪ್ರತಿಶತಕ್ಕಿಂತ ಹೆಚ್ಚು ಚಾರ್ಜ್ ಮಾಡಬೇಡಿ :
ನೀವು ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡೋದ್ರಿಂದ ಬ್ಯಾಟರಿಯ ಮೇಲೆ ಒತ್ತಡ ಬೀಳುತ್ತದೆ, ಹೀಗಾಗಿ 80 ಪರ್ಸೆಂಟ್ ಚಾರ್ಜ್ ಆಗುತ್ತಿದ್ದಂತೆಯೇ ಬ್ಯಾಟರಿ ಚಾರ್ಜ್ ಮಾಡೋದನ್ನು ನಿಲ್ಲಿಸುವುದು ಉತ್ತಮ. ಐಫೋನ್ ಹಾಗೂ ಎಸಸ್ ಕಂಪನಿಯ ಮೊಬೈಲ್ಗಳು 80 ಪರ್ಸೆಂಟ್ ಜಾರ್ಜ್ ಆಗುತ್ತಿದ್ದಂತೆಯೇ ತನ್ನಿಂದ ತಾನೇ ಆಫ್ ಆಗುವ ವೈಶಿಷ್ಟ್ಯವನ್ನು ಹೊಂದಿವೆ,
20 ಪರ್ಸೆಂಟ್ಕ್ಕಿಂತ ಕಮ್ಮಿ ಚಾರ್ಜ್ನಲ್ಲಿ ಮೊಬೈಲ್ ಬಳಸಬೇಡಿ :
ಬ್ಯಾಟರಿ ಫುಲ್ ಚಾರ್ಜ್ ಮಾಡುವುದು ಎಷ್ಟು ತಪ್ಪೋ ಅದೇ ರೀತಿ ಬ್ಯಾಟರಿ ಲೋ ಆದಾಗಲೂ ಬ್ಯಾಟರಿ ಮೇಲೆ ಒತ್ತಡ ಬೀಳುತ್ತದೆ. ಹೀಗಾಗಿ ಮೊಬೈಲ್ 20 ಪ್ರತಿಶತ ಚಾರ್ಜ್ಗೆ ಬರುತ್ತಿದ್ದಂತೆಯೇ 80 ಪ್ರತಿಶತ ಚಾರ್ಜ್ ಆಗುವವರೆಗೆ ಚಾರ್ಜ್ ಮಾಡಿ.
ಮೊಬೈಲ್ ಓವರ್ ಹೀಟ್ ಆಗಲು ಬಿಡಬೇಡಿ
ಮೊಬೈಲ್ ಓವರ್ಹೀಟ್ ಮಾಡುವುದು ಕೂಡ ಬ್ಯಾಟರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮೊಬೈಲ್ನಲ್ಲಿ ಅತಿಯಾಗಿ ಗೇಮ್ ಆಡುವಾಗ ಮೊಬೈಲ್ ಹೀಟ್ ಆಗುತ್ತದೆ. ಕೂಡಲೇ ಗೇಮ್ ಆಡುವುದನ್ನು ನಿಲ್ಲಿಸಿ. ಮೊಬೈಲ್ ಕೂಲ್ ಆಗುವವರೆಗೂ ಬಳಕೆ ಮಾಡಬೇಡಿ.
ಸಾಫ್ಟ್ವೇರ್ ಅಪ್ಡೇಟ್ ಮಾಡಿ :
ಯಾವಾಗಲೂ ಅಪ್ಡೇಟ್ಗಳು ಬಂದಾಗ ಸಾಫ್ಟ್ವೇರ್ ಅಪ್ಡೇಟ್ ಮಾಡಿಬಿಡಿ. ಆದರೆ ಮೊಬೈಲ್ ಅಪ್ಡೇಟ್ ಮಾಡುವಾಗ ಮೊಬೈಲ್ ಚಾರ್ಜ್ 50 ಪರ್ಸೆಂಟ್ಕ್ಕಿಂತ ಮೇಲಿರುವಂತೆ ನೋಡಿಕೊಳ್ಳಿ.