ಬೆಂಗಳೂರಿನಲ್ಲಿ ಬಾಡಿಗೆ ಮನೆಗೂ ಇಂಟರ್ವ್ಯೂ..? ವೈರಲ್ ಆಗಿದೆ ಈ ಪೋಸ್ಟ್…! 16-07-2023 8:45PM IST / No Comments / Posted In: Karnataka, Featured News, Live News ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತುಂಬಾ ಸುಲಭವಾಗಿ ಬಾಡಿಗೆ ಮನೆ ಸಿಕ್ತು ಅಂದ್ರೆ ಆತನಷ್ಟು ಅದೃಷ್ಟವಂತರು ಯಾರೂ ಇರೋಲ್ಲ. ಆದರೆ ಇದೇ ಬಾಡಿಗೆ ಮನೆ ಪಡೆದುಕೊಳ್ಳೊದಕ್ಕೆ ಇಲ್ಲಿ ನೀವು ಮೊದಲಿಗೆ ಬಾಡಿಗೆ ಮನೆ ಮಾಲೀಕರು ಮಾಡೋ ಸಂದರ್ಶನ ಎದುರಿಸಬೇಕು. ಅದು ಪಾಸಾದ್ರೆ ನಿಮಗೆ ಬಾಡಿಗೆ ಮನೆ ಫಿಕ್ಸ್ ಇಲ್ಲಾ ಅಂದ್ರೆ….. ಬಾಡಿಗೆ ಮನೆ ಹುಡುಕೋ ಗೋಳು ತಪ್ಪಿದ್ದಲ್ಲ. ಬಾಡಿಗೆ ಮನೆ ಹುಡುಕುವಾಗ ಆದ ಅನುಭವನ್ನು, ನೀರಜ್ ಮೆಂಟಾ ಅನ್ನುವವರು ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ಮನೆ ಮಾಲೀಕರು ಕೇಳೋ ಒಂದೊಂದು ಪ್ರಶ್ನೆ, ಕಂಪನಿಗಳಲ್ಲಿ ಮ್ಯಾನೇಜರ್ ಕೇಳುವ ಪ್ರಶ್ನೆಗಳಿಗಿಂತಲೂ ಕಠಿಣವಾಗಿರುತ್ತೆ. ಬಾಡಿಗೆ ಮನೆ ಕೇಳಲು ಹೋದ ಮನೆಗಳಲ್ಲೆಲ್ಲ, ನನಗೆ ಆದ ಅನುಭವ ಘನಘೋರ ಎಂದು ಅವರು ಹೇಳಿದ್ದಾರೆ. ‘ಅದರಲ್ಲೂ ಒಂದು ಮನೆ ಬಾಡಿಗೆ ಕೇಳಲು ಹೋದಾಗ ಆ ಮನೆ ಮಾಲೀಕರು ನನ್ನ ಹೆಂಡತಿಯ ಲಿಂಕ್ಡಿನ್ ಪ್ರೊಪೈಲ್ನ್ನ ಶೇರ್ ಮಾಡುವಂತೆ ಹೇಳಿದರು. ಅದರ ಜೊತೆ ಜೊತೆಗೆ ನನ್ನ ಕುಟುಂಬದ ಸದಸ್ಯರೆಲ್ಲರ ಬಗ್ಗೆ ವಿವರಣೆ ಇರೋ ಡೇಟಾ ಕಳಿಸುವಂತೆ ಹೇಳಿದರು. ಇಷ್ಟೆಲ್ಲ ಕಳುಹಿಸಿದ ಮೇಲೆ ಅವರು ಶಾರ್ಟ್ ಲಿಸ್ಟ್ ಮಾಡಿ ಅದರಲ್ಲಿ ಒಬ್ಬರನ್ನ ಸೆಲೆಕ್ಟ್ ಮಾಡ್ತೇವೆ ಎಂದು ಹೇಳಿದ್ದರು.’ ‘ಇದು ಕೇವಲ ಮೊದಲ ಹಂತದ ಸಂದರ್ಶನವಾಗಿತ್ತು. ಆ ನಂತರ ಮತ್ತೆ ಕೊನೆಯ ಹಂತದ ಸಂದರ್ಶನ ಮಾಡಲಾಯಿತು. ಅದರಲ್ಲಿ ಆಯ್ಕೆ ಆದಲ್ಲಿ ಮಾತ್ರ ನಮಗೆ ಮನೆ ಕೊಡುವುದಾಗಿ ಹೇಳಲಾಗಿತ್ತು. ಇಲ್ಲಿಯವರೆಗೂ ನನಗೆ ಆ ಸಂದರ್ಶನದ ರಿಸಲ್ಟ್ ಏನಾಗಿದೆ ಅಂದು ಗೊತ್ತಾಗಿಲ್ಲ. ಆದರೆ ನನ್ನ ಹೆಂಡತಿ ಮಾತ್ರ ಆ ಸಂದರ್ಶನ ಏನಾಯ್ತು ಎಂದು ಪ್ರತಿನಿತ್ಯ ಕೇಳುತ್ತಾಳೆ.’ ಹೀಗಂತ ನಿರಂಜ್ ತಮ್ಮ ಅನುಭವನ್ನ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಕಾಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಅದರಲ್ಲಿ ಕೆಲ ಮನೆ ಮಾಲೀಕರು ಕೂಡ ಕಾಮೆಂಟ್ ಮಾಡಿದ್ದಾರೆ. ಅವರಲ್ಲಿ ಒಬ್ಬರು ’ಬಾಡಿಗೆ ಮನೆ ಮಾಲೀಕರು ಸಾಲ ಮಾಡಿ ಮನೆ ಕಟ್ಟಿರುತ್ತಾರೆ. ಅವರು ಬ್ಯಾಂಕ್ಗಳಿಗೆ ಇಎಂಐ ಕಟ್ಟಬೇಕಾಗಿರುತ್ತೆ. ಆದ್ದರಿಂದ ಟೈಂ ಟು ಟೈಂ ಬಾಡಿಗೆ ಕಟ್ಟುವವರು ಅವಶ್ಯಕತೆ ಅವರಿಗೆ ಇರುತ್ತೆ. ಆದ್ದರಿಂದ ಈ ರೀತಿ ಕೂಲಂಕೂಶವಾಗಿ ವಿಚಾರಣೆ ಮಾಡಿ ಬಾಡಿಗೆ ಕೊಡುವ ಅನಿವಾರ್ಯತೆ ಅವರಿಗಿರುತ್ತೆ ಎಂದಿದ್ದಾರೆ. My tenant interview was longer and more grueling than my Seed round pitch. I recently started househunting in Bangalore and one owner wanted to interview me before saying yes. A 🧵 of all the questions #bangalorehousehunt @peakbengaluru — Neeraj Menta (@neerajmnt) July 12, 2023 Interview – he asked me detailed questions about my background, family size, etc., then moved to my startup. He asked me questions about the business model, burn rate, last-round investors, etc (he had already checked Crunchbase and pulled all the data) — Neeraj Menta (@neerajmnt) July 12, 2023 He then proceeded to advise me on how to be careful in running a business and ensure good unit economics and a sound operating model. He was well-meaning and said reasonable things, but I was surprised at how long the conversation went. — Neeraj Menta (@neerajmnt) July 12, 2023