ಡೊಮಿನಿಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದೆ. ಆದರೆ ಎರಡನೇ ದಿನದಲ್ಲಿ ಪಿಚ್‌ನಲ್ಲಿ ಬಿರುಕುಗಳು ಕಂಡುಬಂದಿದ್ದವು. ಕೆಲವು ಎಸೆತಗಳು ಬ್ಯಾಟರ್‌ಗಳನ್ನು ಆಶ್ಚರ್ಯಗೊಳಿಸುವಂತಿತ್ತು.
3 ನೇ ದಿನದಂದು ಕ್ರೇಗ್ ಬ್ರಾಥ್‌ವೈಟ್ ಅವರ ಎಸೆತವು ಪಿಚ್ ಮೇಲಿನ ಬಿರುಕೊಂದಾರ ಮೇಲೆ ಬಿದ್ದಾಗ ಅದು ನಿರೀಕ್ಷೆಗೆ ಮೀರಿದ ಸ್ಪಿನ್ ಬಾಲಾಗಿ ಪರಿವರ್ತನೆಯಾಯಿತು. ಈ ಬಾಲಿಂಗ್‌ನ ಅನಿರೀಕ್ಷಿತ ಚಲನೆಯನ್ನು ನೋಡಿ ರವೀಂದ್ರ ಜಡೇಜಾ ಹೆಲ್ಮೆಟ್ ಬೇಕೆಂದರು. ಇದನ್ನು ನೋಡಿದ ವಿರಾಟ್ ಕೊಹ್ಲಿ ನಸು ನಕ್ಕರು. ಇದು ಸ್ಪಪ್ಟವಾಗಿ ಕಂಡುಬರುತಿತ್ತು.
ಇನ್ನು ರವಿಚಂದ್ರನ್ ಅಶ್ವಿನ್ ವೆಸ್ಟ್ ಇಂಡೀಸ್‌ನ ಬ್ಯಾಟಿಂಗ್ ಲೈನ್ಅಪ್‌ಗೆ ತುಂಬಾ ಹೊಂದಿಕೊಂಡಿದ್ದರು. ಭಾರತವು ತನ್ನ ಮೊದಲ ಇನ್ನಿಂಗ್ಸ್‌ನ್ನು ಐದು ವಿಕೆಟ್ ನಷ್ಟಕ್ಕೆ 421 ರನ್‌ಗೆ ಡಿಕ್ಲೇರ್ ಮಾಡಿತು. ನಂತರ ಕೆರಿಬಿಯನ್ ಬ್ಯಾಟರ್‌ಗಳಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು. ಆದರೆ ಅವರು ಮೂರು ದಿನಗಳಲ್ಲಿ 50 ಓವರ್‌ನಲ್ಲಿ 130 ಕ್ಕೆ ಆಲೌಟ್ ಆಯಿತು.
ಅಶ್ವಿನ್ ಮೊದಲ ಇನ್ನಿಂಗ್ಸ್‌ನಲ್ಲಿ 21.3 ಓವರ್‌ಗಳಲ್ಲಿ 71 ರನ್ ನೀಡಿ ಏಳು ವಿಕೆಟ್‌ಗಳನ್ನು ಪಡೆದರು. ಈ ಮೂಲಕ 33 ನೇ ಬಾರಿಗೆ ಐದು ವಿಕೆಟ್ ಸಾಧನೆಯನ್ನು ಮಾಡಿದ್ರು. ಇದು ಸಾಗರೋತ್ತರ ಟೆಸ್ಟ್‌ನಲ್ಲಿ ಅವರ ಅತ್ಯುತ್ತಮವಾಗಿದೆ. ಆರಂಭಿಕ ದಿನದಂದು ವೆಸ್ಟ್ ಇಂಡೀಸ್ 150 ರನ್‌ಗಳಿಗೆ ಆಲೌಟ್ ಆದ ನಂತರ ಫಲಿತಾಂಶವು ಮುಂಚೂಣಿಯಲ್ಲಿತ್ತು. ಚೊಚ್ಚಲ ಪಂದ್ಯದಲ್ಲಿ 171 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಅವರು ಭಾರತ ದೊಡ್ಡ ಗೆಲುವನ್ನು ಪಡೆಯಲು ಸಹಾಯವಾದರು. ವಿರಾಟ್ ಕೊಹ್ಲಿ 182 ಬಾಲ್‌ಗೆ 76 ರನ್ ಗಳಿಸಿದರು.