ಚಿತ್ರದುರ್ಗ : ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ 19 ರಿಂದ 35 ವರ್ಷ ವಯೋಮಿತಿಯೊಳಗಿನ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಆಗಸ್ಟ್ 11 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಎನ್.ಹೆಚ್-13, ಹರಿಕೃಪ ಬಿಲ್ಡಿಂಗ್, ಶಿವಮೊಗ್ಗ ರಸ್ತೆ, ಹೊಳಲ್ಕೆರೆ-577526 ಇಲ್ಲಿ ಅರ್ಜಿ ಪಡೆದು, ಅರ್ಹ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಖಾಲಿ ಇರುವ 19 ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು ಮೀಸಲಾತಿ ವಿವರ ಇಂತಿದೆ. ಗಂಗಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗಸಮುದ್ರ-ಬಿ (ಇತರೆ), ಗುಂಜಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಎಚ್. ಹಳ್ಳಿಯ ಗೊಲ್ಲರಹಟ್ಟಿ-ಎ (ಇತರೆ), ಹೆಚ್.ಡಿ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಚ್.ಡಿ.ಪುರ-ಡಿ (ಇತರೆ), ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪರಿಗೇನಹಳ್ಳಿ-ಸಿ (ಇತರೆ), ಹೆಚ್.ಡಿ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮೇನಹಳ್ಳಿ (ಪರಿಶಿಷ್ಟ ಜಾತಿ), ಟಿ.ನುಲೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಡರನಾಳ್-ಎ (ಇತರೆ), ಚಿತ್ರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮೃತಾಪುರ-ಬಿ (ಇತರೆ), ಹೆಚ್.ಡಿ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಕಟ್ಟೆ (ಇತರೆ), ಆಡನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಕೆನಹಟ್ಟಿ (ಪರಿಶಿಷ್ಟ ಜಾತಿ), ಬಿ.ದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲವ್ವನಾಗತಿಹಳ್ಳಿ ಲಂಬಾಣಿ ಹಟ್ಟಿ (ಪರಿಶಿಷ್ಟ ಜಾತಿ), ಹಿರೇ ಎಮ್ಮಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡೂರು-ಬಿ(ಇತರೆ), ಆಡನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಡಿಗಟ್ಟೆ-ಬಿ (ಇತರೆ), ಹೆಚ್.ಡಿ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಚ್.ಡಿ.ಪುರ-ಎ (ಇತರೆ), ಬಿ.ದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ದುರ್ಗ-ಎ (ಇತರೆ), ಹಿರೇ ಎಮ್ಮಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡೂರು-ಎ (ಇತರೆ), ಹಿರೇ ಎಮ್ಮಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಹಳ್ಳಿ (ಪರಿಶಿಷ್ಟ ಜಾತಿ), ದುಮ್ಮಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಮ್ಮಿ ಗೊಲ್ಲರಹಟ್ಟಿ-ಬಿ (ಪರಿಶಿಷ್ಟ ಜಾತಿ), ಗುಂಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡೇರಿ ಕಾವಲ್ (ಪರಿಶಿಷ್ಟ ಜಾತಿ), ಮುತ್ತುಗದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತುಗದೂರು-ಎ (ಇತರೆ).
ಖಾಲಿ ಇರುವ 1 ಮಿನಿ ಅಂಗನವಾಡಿ ಕಾರ್ಯಕರ್ತೆ ಹುದ್ದೆ ವಿವರ ಇಂತಿದೆ. ಗುಂಜಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಕಾಲುವೆ ಕೊರಚರ ಹಟ್ಟಿ (ಪರಿಶಿಷ್ಟ ಜಾತಿ).
ಖಾಲಿ ಇರುವ 39 ಅಂಗನವಾಡಿ ಸಹಾಯಕಿಯರು ಹುದ್ದೆಗಳ ವಿವರ ಇಂತಿದೆ. ರಾಮಗಿರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಯಕನ ಕಟ್ಟೆ (ಪರಿಶಿಷ್ಟ ಜಾತಿ), ಗಂಗಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಕಟ್ಟ ಉಪ್ಪಾರ ಹಟ್ಟಿ ( ಪರಿಶಿಷ್ಟ ಪಂಗಡ), ಗುಂಜಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಎಚ್. ಹಳ್ಳಿ ಗೊಲ್ಲರಹಟ್ಟಿ-ಬಿ(ಇತರೆ), ಆಡನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸನಘಟ್ಟ (ಇತರೆ), ಅಂದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ಯಾರೇಹಳ್ಳಿ (ಇತರೆ), ಅಂದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ (ಇತರೆ), ಅಂದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದನೂರು ಗೇಟ್ (ಇತರೆ), ಹೆಚ್.ಡಿ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಚ್.ಡಿ ಪುರ-ಡಿ (ಇತರೆ), ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪರಿಗೇನಹಳ್ಳಿ-ಸಿ(ಇತರೆ), ಚಿತ್ರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮೃತಾಪುರ-ಬಿ (ಇತರೆ), ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲರಹಳ್ಳಿ(ಇತರೆ), ಚಿತ್ರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮೃತಾಪುರ-ಎ (ಇತರೆ), ಚಿತ್ರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿತ್ರಹಳ್ಳಿ ಗೊಲ್ಲರಹಟ್ಟಿ (ಇತರೆ), ಟಿ.ನುಲೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ. ನುಲೆನೂರು-ಎ(ಪರಿಶಿಷ್ಟ ಜಾತಿ), ಆಡನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಡಿಗಟ್ಟೆ-ಎ(ಇತರೆ), ಚಿಕ್ಕಎಮ್ಮಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡೂರು-ಬಿ(ಇತರೆ), ಆಡನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಡಿಗಟ್ಟೆ-ಬಿ (ಇತರೆ), ಬಿ.ದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲವನಾಗತಿಹಳ್ಳಿ (ಇತರೆ), ಬಿ.ದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲವನಾಗತಿಹಳ್ಳಿ ಲಂಬಾಣಿಹಟ್ಟಿ(ಪರಿಶಿಷ್ಟ ಜಾತಿ), ದುಮ್ಮಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಮ್ಮಿ-ಎ (ಇತರೆ), ದುಮ್ಮಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಮ್ಮಿ ಗೊಲ್ಲರಹಟ್ಟಿ-ಬಿ(ಪರಿಶಿಷ್ಟ ಜಾತಿ), ಶಿವಗಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿನೀರಕಟ್ಟೆ (ಇತರೆ), ತಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರಲಕಟ್ಟೆ-ಬಿ (ಪರಿಶಿಷ್ಟ ಜಾತಿ), ತುಪ್ಪದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಾಪುರ (ಪರಿಶಿಷ್ಟ ಜಾತಿ), ತಾಳಿಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಕಟ್ಟೆ-ಎಫ್(ಇತರೆ), ಹೊಳಲ್ಕೆರೆ ವಾರ್ಡ್-16 ಎ.ಕೆ ಕಾಲೋನಿ (ಪರಿಶಿಷ್ಟ ಜಾತಿ), ಗುಂಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡೇರಿ-ಸಿ (ಇತರೆ), ಹೊಳಲ್ಕೆರೆ ವಾರ್ಡ್ 12-13 ಕೆಂಚವೀರಪ್ಪ ಬಡವಾಣೆ (ಇತರೆ), ಹೊಳಲ್ಕೆರೆ ವಾರ್ಡ್ 5-6 ಬಸವ ಲೇಔಟ್ (ಇತರೆ), ಹೊಳಲ್ಕೆರೆ ವಾರ್ಡ್ 4-5 ಸಿದ್ದಪ್ಪ ಲೇಔಟ್ (ಇತರೆ), ಗುಂಜಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಕಾಲುವೆ(ಇತರೆ), ಹೊಳಲ್ಕೆರೆ ವಾರ್ಡ್ 3-8 ಹೊಳಲ್ಕೆರೆ-ಎ (ಇತರೆ), ಚಿತ್ರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿತ್ರಹಳ್ಳಿ ಗೇಟ್ (ಪರಿಶಿಷ್ಟ ಜಾತಿ), ಹೊಳಲ್ಕೆರೆ ವಾರ್ಡ್ 9-10 ಗೊಲ್ಲರಬೀದಿ(ಇತರೆ), ಆಡನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡನೂರು-ಎ (ಇತರೆ), ತಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳ್ಯ-ಸಿ (ಇತರೆ), ಗುಂಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳಲ್ಕೆರೆ ಲಂಬಾಣಿ ಹಟ್ಟಿ (ಪರಿಶಿಷ್ಟ ಜಾತಿ), ಆರ್. ನುಲೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್.ನುಲೇನೂರು-ಬಿ (ಇತರೆ), ಚಿಕ್ಕಜಾಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಜಾಜೂರು ಮಾರುತಿ ನಗರ (ಪರಿಶಿಷ್ಟ ಜಾತಿ) ಇಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಎನ್.ಹೆಚ್.13 ಹರಿಕೃಪ ಬಿಲ್ಡಿಂಗ್, ಶಿವಮೊಗ್ಗ ರಸ್ತೆ, ಹೊಳಲ್ಕೆರೆ-577526, ದೂರವಾಣಿ ಸಂಖ್ಯೆ 08191-275250ಗೆ ಸಂಪರ್ಕಿಸಬಹುದು ಹೊಳಲ್ಕೆರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.