ವಿಕೇಂಡ್ನಲ್ಲಿ ಹಲವು ಮಂದಿ ಎಣ್ಣೆ ಪಾರ್ಟಿ ಮಾಡಲು ಪ್ಲ್ಯಾನ್ ಹಾಕಿಕೊಂಡಿದ್ದೀರಾ..? ಹಾಗಾದ್ರೆ ಮಿತಿಯಲ್ಲಿಯೇ ಆಲ್ಕೋಹಾಲ್ ಕುಡಿಯುವುದು ಹ್ಯಾಂಗೊವರ್ ಅನ್ನು ತಡೆಗಟ್ಟುವ ಅತ್ಯುತ್ತಮ ವಿಧಾನವಾಗಿದೆ.
ಆದ್ರು ಸಹ ವಾರವಿಡಿ ಕಠಿಣ ಕೆಲಸಗಳನ್ನು ಮಾಡಿ ನಂತರ ನೀವು ಕುಡಿಯಲು ಬಯಸಿದಾಗ ವಿಕೇಂಡ್ನ್ನು ಅತ್ಯುತ್ತಮವಾಗಿ ಮಾಡಲು ಕೆಲವು ಆಹಾರಗಳಿವೆ. ವಿಷಯ ಏನಂದ್ರೆ ಕುಡಿಯುವ ಮೊದಲು ಆಹಾರವನ್ನು ಸೇವಿಸುವುದರಿಂದ ದೇಹ ಆಲ್ಕೋಹಾಲ್ ಹೀರಿಕೊಳ್ಳುವ ವೇಗವನ್ನು ಕಡಿಮೆ ಮಾಡುತ್ತದೆ. ಯಾಕಂದ್ರೆ ಆಹಾರವು ಹೊಟ್ಟೆಯಲ್ಲಿಯೇ ಆಲ್ಕೋಹಾಲ್ನ್ನು ಹೆಚ್ಚು ಕಾಲ ಒಳಗೆ ಇಡುತ್ತದೆ.
ಈ ರೀತಿಯ ಪಾರ್ಟಿಗೆ ಹೊರಡುವ ಮೊದಲು ಕೊಬ್ಬು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಗಳಿಂದ ಸಮೃದ್ಧವಾಗಿರುವ ಆಹಾರವನ್ನು ತಿನ್ನುವುದು ನಶೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ನೀವು ಕುಡಿಯುವುದನ್ನು ಎಂಜಾಯ್ ಮಾಡಲು ಮಾತ್ರವಲ್ಲದೆ ಮರುದಿನ ಬೆಳಿಗ್ಗೆ ಹ್ಯಾಂಗೊವರ್ನಿಂದ ದೂರವಿಡಲು ಸಾಧ್ಯವಾಗುತ್ತದೆ. ಹೊಟ್ಟೆಯನ್ನು ತುಂಬುವ ಮತ್ತು ಹ್ಯಾಂಗೊವರ್ ತಡೆಗಟ್ಟುವ ಕೆಲವು ಆಹಾರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕೆಳಗೆ ಓದಿ.
ಮೊಟ್ಟೆ
ಮೊಟ್ಟೆಯಂತಹ ಪ್ರೋಟೀನ್ ಭರಿತ ಆಹಾರಗಳು ದೇಹವು ದೀರ್ಘಕಾಲದವರೆಗೆ ಪೂರ್ಣವಾಗಿ ಅನುಭವಿಸುವಂತೆ ಮಾಡುತ್ತದೆ. ಇದರ ಜೊತೆ ಆಲ್ಕೋಹಾಲ್ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಮೊಟ್ಟೆಯಲ್ಲಿ ಮೈಕ್ರೊನ್ಯೂಟ್ರಿಯಂಟ್ ಸಮೃದ್ಧವಾಗಿರುತ್ತೆ. ಮದ್ಯ ಸೇವನೆ ಮಾಡಿದ ನಂತರ ತಡರಾತ್ರಿ ಹಸಿವಾಗುವುದನ್ನು ಕಡಿಮೆ ಮಾಡುತ್ತದೆ. ನೀವು ಮಿತವಾಗಿ ತಿನ್ನುವುದು ಮಾತ್ರವಲ್ಲದೆ ಮರುದಿನ ಬೆಳಿಗ್ಗೆ ತಲೆನೋವು ಇಲ್ಲದೆ ಎಚ್ಚರಗೊಳ್ಳುತ್ತೀರಿ.
ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಸೋಡಿಯಂನಂತಹ ಅಂಶವಿದ್ದು ಇದು ಸ್ನಾಯುವಿನ ಕಾರ್ಯಕ್ಕೆ ಮುಖ್ಯವಾಗಿದೆ. ದ್ರವ ನಿಯಂತ್ರಣ ಮತ್ತು ರಕ್ತದೊತ್ತಡದ ನಿಯಂತ್ರಣಕ್ಕೆ ಮುಖ್ಯ ಆಹಾರವಾಗಿದೆ. ಆಲ್ಕೋಹಾಲ್ ದೇಹದಲ್ಲಿ ಪೊಟ್ಯಾಸಿಯಮ್ ಮಟ್ಟವನ್ನು ಕಡಿಮೆ ಮಾಡುತ್ತದೆ ಆದ್ದರಿಂದ ಕೆಲವು ಪಾನೀಯಗಳನ್ನು ಸೇವಿಸುವ ಮೊದಲು ಒಂದೆರಡು ಬಾಳೆಹಣ್ಣುಗಳನ್ನು ತಿನ್ನುವುದರಿಂದ ಪೊಟ್ಯಾಸಿಯಮ್ ಮಟ್ಟ ನಿಯಂತ್ರಣದಲ್ಲಿರುತ್ತೆ.