ಪತಿ ಕಣ್ಣ ಮುಂದೆಯೇ ಸಮುದ್ರದಲೆಯಲ್ಲಿ ಕೊಚ್ಚಿ ಹೋದ ಪತ್ನಿ; ಶಾಕಿಂಗ್ ವಿಡಿಯೋ ವೈರಲ್ 16-07-2023 9:54AM IST / No Comments / Posted In: Latest News, India, Live News ಮುಂಬೈನ ಬಾಂದ್ರಾ ಸಮುದ್ರ ತೀರದಲ್ಲಿ ಜ್ಯೋತಿ ಸೋನಾರ್ ಎಂದು ಗುರುತಿಸಲಾದ 32 ವರ್ಷದ ಮಹಿಳೆ ಅಲೆಯ ರಭಸಕ್ಕೆ ಕೊಚ್ಚಿಕ್ಕೊಂಡು ಹೋದ ವಿಡಿಯೋ ವೈರಲ್ ಆಗುತ್ತಲೇ ಇದೆ. ಜುಲೈ 9 ರ ಭಾನುವಾರ ಸಂಜೆ ಈ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಪತಿ ಮುಖೇಶ್ ಹಾಗೂ ಅವರ ಮೂವರು ಮಕ್ಕಳು ಸೋನಾರ್ ಅಲೆಯಲ್ಲಿ ಕೊಚ್ಚಿ ಹೋದರೂ ಬಚಾವು ಮಾಡಲಾಗದಂತಹ ಅಸಹಾಯಕ ಪರಿಸ್ಥಿತಿಯಲ್ಲಿದ್ದರು. ಫೋಟೋ ತೆಗೆದುಕೊಳ್ಳಬೇಕು ಅಂತಾ ದಂಪತಿ ಬಂಡೆಯ ಮೇಲೆ ಕುಳಿತಿದ್ದರು. ಆದರೆ ರಭಸವಾಗಿ ಬಂದ ಅಲೆಯು ಅವರ ಬದುಕನ್ನೇ ಅಂತ್ಯಗೊಳಿಸಿದೆ. ರಬಲೆಯ ಗೌತಮ್ ನಗರದಲ್ಲಿ ವಾಸಿಸುವ ಮುಖೇಶ್ ಈ ಘಟನೆಯ ಬಗ್ಗೆ ಇಂಚಿಂಚು ಮಾಹಿತಿ ನೀಡಿದ್ದಾರೆ. ನಾನು ನನ್ನ ಪತ್ನಿಯನ್ನು ರಕ್ಷಿಸಲು ಕೈಲಾದ ಪ್ರಯತ್ನ ಮಾಡಿದ್ದೆ. ಆದರೆ ನಾಲ್ಕನೇಯ ಅಲೆ ನಮಗೆ ಹಿಂದಿನಿಂದ ಬಂದು ಅಪ್ಪಳಿಸಿದಾಗ ನಾವಿಬ್ಬರೂ ಸಮತೋಲನ ಕಳೆದುಕೊಂಡೆವು. ನಾವಿಬ್ಬರೂ ಜಾರಿ ಬಿದ್ದಿದ್ದೆವು. ಓರ್ವ ನನ್ನ ಕಾಲನ್ನು ಹಿಡಿದೆಳೆದು ಅಪಾಯದಿಂದ ಪಾರು ಮಾಡಿದ. ನಾನು ಆಕೆಯ ಸೀರೆಯನ್ನು ಎಳೆಯುತ್ತಿದ್ದೆ. ಆದರೂ ಆಕೆಯನ್ನು ರಕ್ಷಿಸಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ ಎಂದಿದ್ದಾರೆ. ಪ್ರತಿ 2 ವಾರಕ್ಕೊಮ್ಮೆ ಮುಖೇಶ್ ಕುಟುಂಬ ತಪ್ಪದೇ ಪಿಕ್ನಿಕ್ಗೆ ತೆರಳುತ್ತಿತ್ತು. ಆದೇ ರೀತಿ ಭಾನುವಾರದಂದು ಜುಹು ಚೌಪಾಟಿಗೆ ಭೇಟಿ ನೀಡಿದ್ದರು. ಆದರೆ ಬೀಚ್ಗೆ ಪ್ರವೇಶ ಅಂದು ನಿರ್ಬಂಧವಾಗಿತ್ತು. ಹೀಗಾಗಿ ಬೇಲ್ಪುರಿ ಕೇಂದ್ರದಲ್ಲಿ ಊಟ ಮಾಡಲು ಮುಖೇಶ್ ಕುಟುಂಬ ನಿರ್ಧರಿಸಿತ್ತು. ಆದರೆ ಕೊನೆಯಲ್ಲಿ ಬಾಂದ್ರಾ ಕಡೆ ಹೋಗಲು ನಿರ್ಧರಿಸಿದ ಈ ಕುಟುಂಬಕ್ಕೆ ಇಂತಹದ್ದೊಂದು ಆಘಾತ ಎದುರಾಗಿದೆ. Caution: Disturbing Visuals, Viewer Discretion Advised #alert : Be careful ❗️ guys don’t get tempt with social media and give up on lives #bandra #bandstand #mumbairains pic.twitter.com/bFe4bTdXeS — Suresh Kumar Kurapaty (@kurafatygyan) July 14, 2023