alex Certify ಜ್ವಾಲಾಮುಖಿಯಲ್ಲಿ ಪಿಜ್ಜಾ ಬೇಯಿಸಿ ತಿಂದ ಮಹಿಳೆ : ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜ್ವಾಲಾಮುಖಿಯಲ್ಲಿ ಪಿಜ್ಜಾ ಬೇಯಿಸಿ ತಿಂದ ಮಹಿಳೆ : ವೈರಲ್​ ಆಯ್ತು ವಿಡಿಯೋ

ರುಚಿ ರುಚಿಯಾದ ಪಿಜ್ಜಾ ತಿನ್ನಲು ನೀವು ಹೆಸರಾಂತ ಪಿಜ್ಜಾ ಮಳಿಗೆಗಳಿಗೆ ಭೇಟಿ ನೀಡುತ್ತೀರಿ. ಇಲ್ಲವೇ ಆನ್​ಲೈನ್​ ಆರ್ಡರ್​ ಮಾಡುತ್ತೀರಿ. ಇದೂ ಸಾಲದು ಎಂದರೆ ಮನೆಯಲ್ಲಿ ತಾವೇ ಪಿಜ್ಜಾ ತಯಾರಿಸಿ ತಿನ್ನುವವರೂ ಇದ್ದಾರೆ. ಆದರೆ ಎಂದಾದರೂ ಜ್ವಾಲಾಮುಖಿಯಿಂದ ಪಿಜ್ಜಾವನ್ನು ಬೇಯಿಸಿ ತಿನ್ನಬಹುದು ಎಂದು ಊಹಿಸಿದ್ದೀರಾ..? ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಫೋಟೋವೊಂದರಲ್ಲಿ ಇಂತಹ ಘಟನೆ ನಡೆದಿರೋದನ್ನು ಕಾಣಬಹುದಾಗಿದೆ.

ಅಲೆಕ್ಸಾಂಡ್ರಾ ಬ್ಲೊಡ್ಜೆಟ್ Instagram ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಗ್ವಾಟೆಮಾಲಾದಲ್ಲಿ ಅವರ ಪ್ರವಾಸದ ಆಸಕ್ತಿದಾಯಕ ಕ್ಷಣವನ್ನು ಕಾಣಬಹುದಾಗಿದೆ. ಅಲೆಕ್ಸಾಂಡ್ರಾ ಕುದಿಯುತ್ತಿದ್ದ ಜ್ವಾಲಾಮುಖಿಯಿಂದ ಪಿಜ್ಜಾವನ್ನು ಬೇಯಿಸಿ ತಿಂದಿದ್ದಾರೆ.

ಸಕ್ರಿಯ ಜ್ವಾಲಾಮುಖಿಯ ಮೇಲೆ ಬೇಯಿಸಿದ ಪಿಜ್ಜಾವನ್ನು ತಿನ್ನಲು ಗ್ವಾಟೆಮಾಲಾಗೆ ಪ್ರಯಾಣಿಸುತ್ತಿದ್ದೇನೆ. ಬಹುಶಃ ನಾವು ಇದಕ್ಕೆಂದೇ ಅಲ್ಲಿಗೆ ಪ್ರಯಾಣಿಸಿಲ್ಲ, ಆದರೆ ಇದೊಂದು ರೀತಿಯಲ್ಲಿ ನಮ್ಮ ಮೋಜಿಗೆ ಬೋನಸ್​ ನೀಡಿದಂತಿತ್ತು ಎಂದು ಈ ವಿಡಿಯೋಗೆ ಶಿರ್ಷಿಕೆ ನೀಡಲಾಗಿದೆ.

ಈ ವೀಡಿಯೊ 1.2 ಮಿಲಿಯನ್ ವೀವ್ಸ್​ ಮತ್ತು ಲಕ್ಷಗಟ್ಟಲೇ ಕಮೆಂಟ್​ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಮತ್ತು ಟನ್ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ವಿಶಿಷ್ಟ ಖಾದ್ಯವನ್ನು ಕಂಡು ಜನ ಬೆರಗಾದರು. ಪಿಜ್ಜಾ ರುಚಿ ಹೇಗಿದೆ ಎಂದು ತಿಳಿದುಕೊಳ್ಳಲು ಹಲವರು ಕಮೆಂಟ್ ಮಾಡಿ ಕೇಳಿದ್ದಾರೆ.

https://youtu.be/rTW_V8GUYgI

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...