ನವದೆಹಲಿ: ಭಾರತದ ಮೂರನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆಯಾದ ಚಂದ್ರಯಾನ-3 ರ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 2.35ಕ್ಕೆ ಎಲ್ವಿಎಂ 3 ರಾಕೆಟ್ ಮೂಲಕ ಚಂದ್ರಯಾಣ-3 ಉಡಾವಣೆ ಮಾಡಲಿದೆ.
ಗುರುವಾರ ಮಧ್ಯಾಹ್ನ 1.05ಕ್ಕೆ 25 ಗಂಟೆಗಳ ಕೌಂಟ್‌ಡೌನ್ ಆರಂಭವಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಮಧ್ಯಾಹ್ನ 2.35 ಕ್ಕೆ ಎಲ್ವಿಎಂ 3 ರಾಕೆಟ್ ಮೂಲಕ ಚಂದ್ರಯಾನ-3 ಅನ್ನು ಉಡಾವಣೆ ಮಾಡಲಿದೆ.
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ವಿಜ್ಞಾನಿಗಳು ಎಲ್‌ವಿಎಂ ಮಾರ್ಕ್ III ರಾಕೆಟ್‌ನ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ಎಲ್ಲಾ ವ್ಯವಸ್ಥೆಗಳನ್ನು ಮತ್ತು ಕೊನೆಯ ಕ್ಷಣದ ಪರಿಶೀಲನೆಗಳನ್ನು ಮಾಡುತ್ತಿದ್ದಾರೆ.
ಭಾರತವು ತನ್ನ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲ್ಮೈಯಲ್ಲಿ ಇಳಿಸಿದ ನಾಲ್ಕನೇ ದೇಶವಾಗಲಿದೆ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಗಾಗಿ ದೇಶದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. LVM3 ಇಸ್ರೋದ ಕಾರ್ಯಾಚರಣೆಯ ಹೆವಿ ಲಿಫ್ಟ್ ಉಡಾವಣಾ ವಾಹನವಾಗಿದೆ.