ದೆಹಲಿಯಲ್ಲಿ ಘೋರ ಕೃತ್ಯ; ಪೊಲೀಸ್ ಸೋಗಿನಲ್ಲಿ ಯುವತಿ ಮೇಲೆ ಅತ್ಯಾಚಾರ

ಪೊಲೀಸರ ಸೋಗಿನಲ್ಲಿ ವ್ಯಕ್ತಿಯೊಬ್ಬ ಯುವತಿಯ ಮೇಲೆ ಅತ್ಯಾಚಾರ ನಡೆಸಿರೋ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ. ಶುಕ್ರವಾರ (ಜುಲೈ 7) ದೆಹಲಿಯ ಪ್ರಶಾಂತ್ ವಿಹಾರ್‌ನಲ್ಲಿ ಯುವತಿಯೊಬ್ಬರ ಅಪಾರ್ಟ್‌ಮೆಂಟ್ ಬಳಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆತನನ್ನು ಗುರುವಾರ ಬಂಧಿಸಲಾಗಿದೆ. ಮಹಿಳೆಗೆ ಬೆದರಿಕೆ ಹಾಕಲು ಪೊಲೀಸ್ ಅಧಿಕಾರಿಯಂತೆ ನಟಿಸಿದ್ದ ಆತ ಘಟನೆಯ ನಂತರ ಪರಾರಿಯಾಗಿದ್ದ.‌

ಜುಲೈ 7 ರಂದು ಸಂಜೆ ಯುವತಿ ತನ್ನ ಪ್ರಿಯಕರನೊಂದಿಗೆ ಕಾರಿನಲ್ಲಿ ಕುಳಿತಿದ್ದರು. ಆ ವೇಳೆ ಆರೋಪಿ ರವಿ ಸೋಲಂಕಿ ತನ್ನ ಮೊಬೈಲ್ ಬಳಸಿ ರಹಸ್ಯವಾಗಿ ಕಾರ್ ನಲ್ಲಿದ್ದ ಜೋಡಿಯ ಫೋಟೋ ತೆಗೆದಿದ್ದ.

ಸ್ವಲ್ಪ ಸಮಯದ ನಂತರ ಅಪಾರ್ಟ್ಮೆಂಟ್ ಹೊರಗೆ ಯುವತಿಯನ್ನು ಡ್ರಾಪ್ ಮಾಡಿ ಬಾಯ್ ಫ್ರೆಂಡ್ ಹೋಗಿದ್ದಾನೆ. ತನ್ನ ಬೈಕ್‌ನಲ್ಲಿ ಹೊರಗೆ ನಿಂತಿದ್ದ ಆರೋಪಿ ಕಟ್ಟಡದೊಳಗೆ ಹೋದ ಯುವತಿಯನ್ನು ಹಿಂಬಾಲಿಸಿದ್ದ.

ಯುವತಿ ಮೆಟ್ಟಿಲುಗಳ ಮೇಲೆ ಒಬ್ಬರೇ ಹೋಗುತ್ತಿದ್ದುದ್ದನ್ನ ಕಂಡು ತಾನು ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಆಕೆ ಗೆಳೆಯನೊಂದಿಗಿದ್ದ ರೆಕಾರ್ಡ್ ಮಾಡಿದ ವಿಡಿಯೋವನ್ನು ತೋರಿಸಿ ಬೆದರಿಕೆ ಹಾಕಿದ್ದಾನೆ. ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಯುವತಿಯೊಂದಿಗೆ ಮೆಟ್ಟಿಲುಗಳ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ.

ಯುವತಿ ತಕ್ಷಣ ತನ್ನ ಪ್ರಿಯಕರನಿಗೆ ಕರೆ ಮಾಡಿ ನಡೆದ ಸಂಗತಿಯನ್ನು ತಿಳಿಸಿದ್ದಾರೆ. ಬಳಿಕ ಯುವತಿ ಕುಟುಂಬ ಸಮೇತ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಮತ್ತು ಯುವತಿಯ ವಿವರಣೆಯ ಆಧಾರದ ಮೇಲೆ ರಚಿಸಿದ ಆರೋಪಿಯ ರೇಖಾಚಿತ್ರದ ಸಹಾಯದಿಂದ ಹುಡುಕಾಡಿ ಆರೋಪಿಯನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read