ಬಿಡುಗಡೆಯಾಗಿ ತಿಂಗಳೂ ಕಳೆದಿಲ್ಲ ಆಗಲೇ ಯೂಟ್ಯೂಬ್ ನಲ್ಲಿ ಸೋರಿಕೆಯಾದ ʼಆದಿಪುರುಷ್ʼ ಸಿನಿಮಾ…!

ಭಾರೀ ಟೀಕೆಗೆ ಗುರಿಯಾಗಿರುವ ಆದಿಪುರುಷ್ ಚಿತ್ರ ಇದೀಗ ಮತ್ತೊಂದು ನಷ್ಟಕ್ಕೆ ಸಿಲುಕಿದೆ. ಪ್ರಭಾಸ್ ಮತ್ತು ಕೃತಿ ಸನನ್ ಅಭಿನಯದ ಆದಿಪುರುಷ್ ಚಿತ್ರಮಂದಿರಕ್ಕೆ ಬಂದು ಒಂದು ತಿಂಗಳೇ ಕಳೆದಿಲ್ಲ. ಆದರೆ ಈಗಾಗ್ಲೇ ಈ ಸಿನಿಮಾ ಯೂಟ್ಯೂಬ್ ನಲ್ಲಿ ಲೀಕ್ ಆಗಿದೆ.

ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಚಿತ್ರವು ಥಿಯೇಟರ್ ಗಳಲ್ಲಿ ಉತ್ತಮ ಆರಂಭ ಕಂಡರೂ ನಂತರ ಡೈಲಾಗ್, ಕಥೆ, ಗ್ರಾಫಿಕ್ಸ್ ವಿಚಾರಕ್ಕೆ ಸಾಕಷ್ಟು ಟೀಕೆಗೆ ಗುರಿಯಾಯಿತು.

ಚಿತ್ರ ನಿರ್ಮಾಣಕಾರರು ಓಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ಇನ್ನೂ ದಿನಾಂಕ ನಿರ್ಧರಿಸಿಲ್ಲ. ಆದರೆ ಈ ನಡುವೆ ಚಿತ್ರವು ಯೂಟ್ಯೂಬ್‌ನಲ್ಲಿ ಸೋರಿಕೆಯಾಗಿದೆ. ಶನಿವಾರದಂದು ಲಿಂಕ್ ಕಾಣಿಸಿಕೊಂಡಿದ್ದು ಈಗಾಗಲೇ 2.3 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ಆದಿಪುರುಷ್ ಸಿನಿಮಾ ಯೂಟ್ಯೂಬ್ ಆವೃತ್ತಿಯು HD ಗುಣಮಟ್ಟದ್ದಾಗಿದೆ. ಚಿತ್ರ ಸೋರಿಕೆ ಬಗ್ಗೆ ಓಂ ರಾವತ್ ಮತ್ತು ನಿರ್ಮಾಪಕರು ಇನ್ನೂ ಪ್ರತಿಕ್ರಿಯಿಸಿಲ್ಲ.

ಏತನ್ಮಧ್ಯೆ ಆದಿಪುರುಷ್ ಚಿತ್ರದ ಸಂಭಾಷಣೆಕಾರ ಮನೋಜ್ ಮುಂತಾಶಿರ್ ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಪ್ರೇಕ್ಷಕರಲ್ಲಿ ಕ್ಷಮೆಯಾಚಿಸಿದ್ದಾರೆ.

https://twitter.com/manojmuntashir/status/1677504640009781250?ref_src=twsrc%5Etfw%7Ctwcamp%5Etweetembed%7Ctwterm%5E1677504640009781250%7Ctwgr%5Ed74b4839aaf94e015875fcda265268de0b7c9299%7Ctwcon%5Es1_&ref_url=https%3A%2F%2Fwww.news18.com%2Fmovies%2Fadipurush-full-movie-leaked-on-youtube-less-than-a-month-of-release-and-it-already-has-2-million-views-8290015.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read