ಹಿರಿಯ ನಟಿ ರೇಖಾ ಬಾರ್ಬಿ ಆಗಿದ್ದರೆ ಹೇಗೆ ಕಾಣುತ್ತಿದ್ದರು..? AI ಸ್ಪೆಷಲ್‌ ಫೋಟೋ ಫುಲ್‌ ವೈರಲ್

ಬಾಲಿವುಡ್‌ನ ಸೂಪರ್‌ಸ್ಟಾರ್‌ ಮತ್ತು ಎವರ್‌ಗ್ರೀನ್‌ ನಟಿ ರೇಖಾ ಯಾರಿಗೆ ಗೊತ್ತಿಲ್ಲ ಹೇಳಿ. ವಯಸ್ಸು 69 ಆಗಿದ್ರೂ, ಇನ್ನೂ ಹದಿಹರೆಯದ ನಾಯಕಿಯರನ್ನ ನಾಚಿಸುವಂತಿದೆ ಇವರ ಸೌಂದರ್ಯ. ‌

ನಟಿ ರೇಖಾ ತಮ್ಮಯುನಿಕ್‌ ಸ್ಟೈಲ್‌ನಿಂದಾನೇ ಎಲ್ಲರ ಗಮನ ಸೆಳೆದುಬಿಡುತ್ತಾರೆ. ಇತ್ತೀಚೆಗೆ ರೇಖಾ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ಹೊಸ ಲುಕ್‌ ನೋಡ್ತಿದ್ರೆ ಎಂಥವರು ಕೂಡಾ ಫಿದಾ ಆಗ್ಹೋಗಿ ಬಿಡ್ತಾರೆ. ಇದೇ ನೋಡಿ ರೇಖಾ ಅವರ ಲೇಟೆಸ್ಟ್‌ ಬಾರ್ಬಿ ಲುಕ್.

ಐಕಾನಿಕ್ ಬಾರ್ಬಿ ಲುಕ್‌ನಲ್ಲಿ ನಟಿ ರೇಖಾ ಮುದ್ದು ಮುದ್ದಾಗಿ ಕಾಣಿಸ್ತಿದ್ದಾರೆ. ಬೇರೆ ಬೇರೆ ಪೋಸ್‌ಗಳಲ್ಲಿ ಪಿಂಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರೋ ಈ ನಟಿಯನ್ನ ನೋಡಿ, ಇಂದಿನ ಯುವ ನಟಿಯರು ಹೊಟ್ಟೆ ಉರಿದುಹೋಗಿರುತ್ತಾರೆ.

ಅಸಲಿಗೆ ಈ ನಟಿಯನ್ನ ಬಾರ್ಬಿ ಅವತಾರದಲ್ಲಿ ಕಾಣುವಂತೆ ಮಾಡಿದ್ದು AI ಸಾಫ್ಟವೇರ್. ವಿವಿಧ ಸನ್ನಿವೇಶಗಳ ಚಿತ್ರವನ್ನ ರಚಿಸಲು ಈ AI ಅಂದರೆ ಕೃತಕಬುದ್ಧಿಯನ್ನ ಬಳಸಲಾಗುತ್ತೆ. ಈ ತಂತ್ರಜ್ಞಾನದ ಸಹಾಯದಿಂದ ಕ್ರಿಕೆಟರ್‌ ವಿರಾಟ್‌ ಕೊಹ್ಲಿ, ಧೋನಿ ಸೇರಿದಂತೆ ಎಲಾನ್‌ ಮಸ್ಕ್‌, ಬಿಲ್‌ಗೇಟ್ಸ್‌ ಹಾಗೂ ಇನ್ನಿತರೆ ಖ್ಯಾತನಾಮರಿಗೆ ಹೊಸ ಹೊಸ ರೂಪವನ್ನ ಕೊಡಲಾಗಿದೆ. ಈ ಬಾರಿ ನಟಿ ರೇಖಾ ಅವರಿಗೆ ಬಾರ್ಬಿ ಲುಕ್‌ ಕೊಡಲಾಗಿದೆ.

ಮೈಂತ್ರಾ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಬಾಲಿವುಡ್ ನಟಿ ರೇಖಾ ಅವರ ಈ ಹೊಸ ಅವತಾರವನ್ನ ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡ್ಕೊಂಡಿದೆ. ಇದಕ್ಕೆ ಶೀರ್ಷಿಕೆಯಲ್ಲಿ AI ಬಳಿ ರೇಖಾ ಅವರಿಗೆ ಬಾರ್ಬಿ ಅವತಾರ ಕೊಡಲು ಹೇಳಿದ್ದೇವು. ಅದಕ್ಕೆ ಸಿಕ್ಕ ಉತ್ತರ ಇದು ಎಂದು ಬರೆಯಲಾಗಿದೆ. ರೇಖಾ ಅವರಿಗೆ ಏನಾದ್ರೂ ವಯಸ್ಸಾಗದೇ ಇದ್ದಿದ್ದರೆ ಇಷ್ಟೇ ಮುದ್ದಾಗಿ ಕಾಣಿಸ್ತಿದ್ದರೋ ಏನೋ ಎಂದು ನೆಟ್ಟಿಗರು ಹೇಳ್ಕೊತಿರೋದಂತೂ ಸತ್ಯ.

https://twitter.com/myntra/status/1676558614885171201?ref_src=twsrc%5Etfw%7Ctwcamp%5Etweetembed%7Ctwterm%5E1676558767281045505%7Ctwgr%5E8d925d0d716d037c3052bdc96834d27d370af813%7Ctwcon%5Es2_&ref_url=https%3A%2F%2Fwww.indiatoday.in%2Ftrending-news%2Fstory%2Fmyntra-shares-ai-images-of-rekha-as-barbie-internet-is-star-struck-2403096-2023-07-07

https://twitter.com/myntra/status/1676558767281045505?ref_src=twsrc%5Etfw%7Ctwcamp%5Etweetembed%7Ctwterm%5E1676558767281045505%7Ctwgr%5E8d925d0d716d037c3052bdc96834d27d370af813%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fmyntra-shares-ai-images-of-rekha-as-barbie-internet-is-star-struck-2403096-2023-07-07

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read