ಹರಿಯಾಣ : ಅವಿವಾಹಿತರಿಗೆ ಹರಿಯಾಣ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಮಾಸಿಕ 2750 ರೂ. ಭತ್ಯೆ ನೀಡುವ ಯೋಜನೆಯೊಂದನ್ನು ಸರ್ಕಾರ ಘೋಷಣೆ ಮಾಡಿದೆ.
ಹೌದು,ಹರಿಯಾಣ ಸರ್ಕಾರ ವಿಧವೆ ಹಾಗೂ ವಿಧುರರಿಗೂ ಪಿಂಚಣಿ ನೀಡುವ ಯೋಜನೆಯನ್ನು ಘೋಷಿಸಿದೆ. 45 ರಿಂದ 60 ವರ್ಷದೊಳಗಿನ ಕಡಿಮೆ ಆದಾಯ ಹೊಂದಿರುವ ಅವಿವಾಹಿತರಿಗೆ ಮಾಸಿಕ 2,750 ರೂಪಾಯಿಗಳ ಭತ್ಯೆಯನ್ನು ನೀಡುವುದಾಗಿ ಘೋಷಣೆ ಮಾಡಿದೆ. ವಾರ್ಷಿಕವಾಗಿ 1.80 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಅವಿವಾಹಿತ ಪುರುಷರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಅವಿವಾಹಿತರ ಜೊತೆಗೆ ವಿಧವೆಯವರಿಗೂ ಇದೇ ರೀತಿಯ ಯೋಜನೆಯನ್ನು ಹರಿಯಾಣ ಸರ್ಕಾರ ಪ್ರಕಟಿಸಿದೆ. ಮುಂದಿನ ತಿಂಗಳಿನಿಂದಲೇ ಈ ಯೋಜನೆ ಜಾರಿಯಾಗಲಿದೆ.
ಪಿಂಚಣಿ ಯೋಜನೆಯಿಂದ ಹರಿಯಾಣ ಸರ್ಕಾರಕ್ಕೆ ವಾರ್ಷಿಕ 240 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ. ಅದೇನೆ ಇರಲಿ ಸರ್ಕಾರ ಈ ಯೋಜನೆಯಿಂದ ಅವಿವಾಹಿತ ಪುರುಷುರು ಫುಲ್ ಖುಷ್ ಆಗಿದ್ದಾರೆ. ಮದುವೆಯಾಗದೇ ಒಂಟಿಯಾಗಿರುವ ಪುರುಷರು ಹಾಗೂ ಪತಿಯನ್ನು ಕಳೆದುಕೊಂಡ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ.