ವಿಜಯಪುರ: ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ವಿಚಾರ ಇನ್ನೂ ಗೊಂದಲದಲ್ಲಿರುವ ಬಗ್ಗೆ ಟಾಂಗ್ ನೀಡಿರುವ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ವಿಪಕ್ಷ ನಾಯಕನಾಗಲೂ ನೂರಾರು ಕೋಟಿ ಫಿಕ್ಸ್ ಮಾಡಿದ್ದಾರಾ? ಈ ಹಿಂದೆ ಸಿಎಂ ಗಾದಿಗಾಗಿ 2500 ಕೋಟಿ ಎಂದು ಹೇಳುತ್ತಿದ್ದರು. ಈಗ ವಿಪಕ್ಷ ನಾಯಕನಾಗಲು ಸಹ ಹಣ ಫಿಕ್ಸ್ ಮಾಡಿದ್ದರಾ? ಎಂದು ಪ್ರಶ್ನಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಿಜೆಪಿಯಲ್ಲಿ ವಿಪಕ್ಷ ನಾಯಕನಾಗಲೂ ಹಣ ಫಿಕ್ಸ್ ಮಾಡಿದ್ದಾರಾ? ಎಂದು ಕೆಳಿದ್ದಾರೆ.
ಇದೇ ವೇಳೆ ಬಡವರ ಪಾಲಿಗೆ ಕಾಂಗ್ರೆಸ್ ಕೊಳ್ಳಿ ಇಟ್ಟಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ಪ್ರಹ್ಲಾದ್ ಜೋಶಿಗೆ ಬಡವರ ಬಗ್ಗೆ ಗೊತ್ತಿಲ್ಲ, ಅನ್ನಭಾಗ್ಯ ಯೋಜನೆ, 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇದೆಲ್ಲ ಶ್ರೀಮಂತರಿಗಿಯೇ? ಘನತೆಗೆ ತಕ್ಕ ಹಾಗೆ ಮಾತನಾಡಿ ಹೊಟ್ಟೆ ಉರಿಗಾಗಿ ಮಾತನಾಡುವುದಲ್ಲ ಎಂದು ತಿರುಗೇಟು ನೀಡಿದ್ದಾರೆ.