alex Certify ತಮಿಳು ಅಕ್ಷರದಂತಿದೆಯೇ ‘ಥ್ರೆಡ್’ ಲೋಗೋ ? ನಡೆದಿದೆ ಹೀಗೊಂದು ಚರ್ಚೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮಿಳು ಅಕ್ಷರದಂತಿದೆಯೇ ‘ಥ್ರೆಡ್’ ಲೋಗೋ ? ನಡೆದಿದೆ ಹೀಗೊಂದು ಚರ್ಚೆ

ಟ್ವಿಟರ್ ಗೆ ಪೈಪೋಟಿಯೆಂಬಂತೆ ಮೆಟಾ ಸಂಸ್ಥೆ ಬಿಡುಗಡೆ ಮಾಡಿರುವ ಥ್ರೆಡ್ ಅಪ್ಲಿಕೇಷನ್ ಇಂಟರ್ನೆಟ್ ನಲ್ಲಿ ಗಮನ ಸೆಳೆಯುತ್ತಿದೆ. ಇಲಾನ್ ಮಸ್ಕ್ ಒಡೆತನದ ಟ್ವಿಟರ್ ಗೆ ಪ್ರತಿಸ್ಪರ್ಧೆ ನೀಡಲು ಥ್ರೆಡ್ ಆಪ್ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗ್ತಿದ್ದು, ಥ್ರೆಡ್ ಲೋಗೋ ವಿಚಾರದಲ್ಲಿ ನೆಟ್ಟಿಗರು ವಿಶ್ಲೇಷಣೆಯಲ್ಲಿ ತೊಡಗಿದ್ದಾರೆ.

ವಿಶೇಷವಾಗಿ ಭಾರತದ ದಕ್ಷಿಣ ಭಾಗದಲ್ಲಿ ಅಪ್ಲಿಕೇಶನ್‌ನ ಲೋಗೋವನ್ನು ಕೇಂದ್ರೀಕರಿಸಲಾಗಿದೆ. ಏಕೆಂದರೆ ಥ್ರೆಡ್ ಲೋಗೋ ವನ್ನ ಅನೇಕ ನೆಟಿಜನ್‌ಗಳು ದ್ರಾವಿಡ ಭಾಷೆಗಳಾದ ತಮಿಳು ಮತ್ತು ಮಲಯಾಳಂಗಳಿಗೆ ಹೋಲುತ್ತದೆ ಎಂದು ಹೇಳುತ್ತಿದ್ದಾರೆ.

ಲೋಗೋ ತಮಿಳು ವರ್ಣಮಾಲೆಯ ‘ಕು’ ಅಕ್ಷರವನ್ನು ಹೋಲುತ್ತದೆ ಎಂದು ಕೆಲವರು ಹೇಳಿದರೆ, ಇತರರು ಲೋಗೋ ಮಲಯಾಳಂ ಅಕ್ಷರಗಳಾದ ‘ಥ್ರ್’ ಮತ್ತು ‘ಕ್ರಾ’ ಅನ್ನು ಹೋಲುತ್ತದೆ ಎಂದು ವಾದಿಸಿದ್ದಾರೆ.

ಲೋಗೋ ಹಿಂದಿಯ ಓಂ ಅಕ್ಷರವನ್ನು ಹೋಲುತ್ತದೆ ಎಂದು ಇತರರು ಪ್ರತಿಪಾದಿಸಿದ್ದು, ಮತ್ತೆ ಕೆಲವು ಮಂದಿ ಇದು ಸಿಹಿತಿಂಡಿ ಜಿಲೇಬಿಯಂತೆ ಕಾಣುತ್ತದೆ ಎಂದು ವ್ಯಂಗ್ಯಾತ್ಮಕ ಟೀಕೆಗಳನ್ನು ಸಹ ಮಾಡಿದ್ದಾರೆ.

ಥ್ರೆಡ್ ಬಿಡುಗಡೆಯಾದ 10 ಗಂಟೆಗಳ ನಂತರ 14 ಮಿಲಿಯನ್ ಜನರು ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ.

— Harini Janakiraman (@HariniLabs) July 6, 2023

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...