SHOCKING NEWS: ಪತಿಯ ಅನೈತಿಕ ಸಂಬಂಧಕ್ಕೆ ಬಲಿಯಾದ ನವವಿವಾಹಿತೆ

ಚಿಕ್ಕಮಗಳೂರು: ಗಂಡನ ಅನೈತಿಕ ಸಂಬಂಧಕ್ಕೆ ಅಮಾಯಕ ಪತ್ನಿ ಬಲಿಯಾದ ಘಟನೆಯಿದು. ಮದುವೆಯಾದ ನಾಲ್ಕೇ ತಿಂಗಳಲ್ಲಿ ಪತಿಯ ಅನೈತಿಕ ಸಂಬಂಧಕ್ಕೆ ಆತನ ಪ್ರಿಯತಮೆಯಿಂದಲೇ ಪತ್ನಿ ಕೊಲೆಯಾಗಿದ್ದಾಳೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಗಣಿಬಸಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 20 ವರ್ಷದ ಭಾರತಿ ಕೊಲೆಯಾದ ಮಹಿಳೆ.

ಮಂಜುನಾಥ್ ಹಾಗೂ ಭಾರತಿ ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಆದರೆ ಪತಿಯ ಅಕ್ರಮ ಸಂಬಂಧದ ಬಗ್ಗೆ ಗೊತ್ತಿರದ ಭಾರತಿ ಈಗ ಕೊಲೆಯಾಗಿ ಹೋಗಿದ್ದಾಳೆ. ಮಂಜುನಾಥ್ ವಿವಾಹವಾಗಿರುವುದು ಗೊತ್ತಾದ ಬೆನ್ನಲ್ಲೇ ಆತನ ಪ್ರಿಯತಮೆ ಕಾಂತಾ ಎಂಬುವವಳು, ಮಂಜುನಾಥ್ ಮನೆಗೆ ಬಂದು ಭಾರತಿಯನ್ನು ಮನೆಯ ಹಿಂಭಾಗದ ಹೊಲಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ.

ಕೃತ್ಯದ ಬಳಿಕ ಆರೋಪಿ ಕಾಂತಾ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ. ವಿಚಾರಣೆ ವೇಳೆ ತನ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು ಭಾರತಿಯನ್ನು ವಿವಾಹವಾಗಿದ್ದಕ್ಕೆ ಆಕೆಯನ್ನು ಹತ್ಯೆ ಮಾಡಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದಾಳೆ.

ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read