ಬೆಂಗಳೂರು : ಸಿದ್ದರಾಮಯ್ಯ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಬಂಪರ್ ಗಿಫ್ಟ್ ಸಿಕ್ಕಿದ್ದು,
ಚುನಾವಣೆಯಲ್ಲಿ ಬೆನ್ನಿಗೆ ನಿಂತ ಅಲ್ಪಸಂಖ್ಯಾತ ಸಮುಧಾಯಕ್ಕೆ ಸಿಎಂ ಭರ್ಜರಿ ಗಿಫ್ಟ್ ನೀಡಿದ್ದಾರೆ.
1-8 ತರಗತಿಯ ವರೆಗೆ ಮೆಟ್ರಿಕ್ ಪೂರ್ವ ವಿಧ್ಯಾರ್ಥಿ ವೇತನ , ಸುಮಾರು 60 ಕೋಟಿ ಮೀಸಲು
, 10 ಹೊಸ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಶಾಲೆಗಳ ಆರಂಭ. ಈಗಿನ 67 ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಶಾಲೆಗ ಉನ್ನತಿಕರಣ. 6-12 ತರಗತಿಯವರೆಗೆ ಉನ್ನತಿಕರಣ, ಮೌಲಾನಾ ಆಜಾದ್ ಶಾಲೆಗಳ ಸ್ವತಃ ಕಟ್ಟಡ ನಿರ್ಮಾಣಕ್ಕೆ ಕ್ರಮ. ಅಲ್ಪಸಂಖ್ಯಾತ ವಿಧ್ಯಾರ್ಥಿಗಳ ಇಂಜಿನಿಯರಿಂಗ್, ವೈದ್ಯಕೀಯ ಕೊರ್ಸ್ ಗೆ ಸಾಲ. ವ್ಯಾಸಂಗ ಮಾಡಲು ೨% ಬಡಿ ದರದಲ್ಲಿ ಸಾಲ, ಅಲ್ಪಸಂಖ್ಯಾತ ಯುವಕರಿಗೆ ಕೌಶಲ್ಯ ತರಬೇತಿ . ರಾಮನಗರ,ಬೆಳಗಾವಿ, ದಾವಣಗೆರೆ, ಕಲಬುರಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೌಶಲ್ಯಭಿವೃದ್ದಿ ತರಬೇತಿ ಗೆ ನಾಲ್ಕು ಕೋಟಿ ಮೀಸಲು.
ಬೆಂಗಳೂರಿನ ಹಜ್ ಭವನದಲ್ಲಿIAS/KAS ತರಬೇತಿ ಪ್ರಾರಂಭ, ವಸತಿ ಸಹಿತ ತರಬೇತಿ ನೀಡಲು ನಿರ್ಧಾರ
ಅಲ್ಪಸಂಖ್ಯಾತ 250 ರ ವಿವಿ ರ್ಯಾಕಿಂಗ್ ಪಡೆದ ವಿಧ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ಶೂನ್ಯ ಬಡ್ಡಿಯಲ್ಲಿ ಸಾಲ, ಅರ್ಧಕ್ಕೆ ನಿಂತ ಶಾದಿಮಹಲ್ ಮರು ನಿರ್ಮಾಣಕ್ಕೆ ಚಾಲನೆ . 54 ಕೋಟಿ ರೂಪಾಯಿ ಇದಕ್ಕಾಗಿ ನೀಸಲು. ಹಿಂದೂಯೇತೆ ಧಾರ್ಮಿಕ ಸಂಸ್ಥೆಗಳ ತಸ್ತಿಕ ಹಣ ಹೆಚ್ಚಳ. 48 ಸಾವಿರ ಕೋಟಿಯಿಂದ 60 ಸಾವಿರ ಕೋಟಿಗೆ ಹೆಚ್ಚಳ. ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ಧಿಗೆ 360 ಕೋಟಿ ಮೀಸಲು.
ಸ್ವಾವಲಂಬಿ ಸಾರಥಿ ಯೋಜನೆ ಅಲ್ಪಸಂಖ್ಯಾತರಿಗೆ ಅನ್ವಯ, ನಾಲ್ಕು ಚಕ್ರಗಳ ವಾಹನ ಖರೀದಿಗೆ 3 ಲಕ್ಷ ಸಹಾಯಧನ, ಕ್ರಿಶ್ಚಿಯನ್ ನಿಗಮ ಮಂಡಳಿ ಸ್ಥಾಪನೆಗೆ 100 ಕೋಟಿ ಮೀಸಲು. ಜೈನರ ಪುಣ್ಯಕ್ಷೇತ್ರ ಅಭಿವೃದ್ಧಿಗೆ 25 ಕೋಟಿಮೀಸಲು. ರಾಜ್ಯದಲ್ಲಿ 49,000 ವಕ್ಪ ಆಸ್ತಿಗಳ ಸಂರಕ್ಷಣೆಗೆ ಕ್ರಮ. ವಕ್ಪ ಆಸ್ತಿ ಸಂರಕ್ಷಣೆಗೆ 50 ಕೋಟಿ ಹಣ ಮೀಸಲು. ಹಲಸೂರು ಗುರುದ್ವಾರ ಅಭಿವೃದ್ಧಿಗೆ 25 ಕೋಟಿ ಮೀಸಲು ಇಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.