2019ರ ನಡೆದ ಲೋಕಸಭಾ ಚುನಾವಣೆಯಲ್ಲಿ ತೇಣಿ ಕ್ಷೇತ್ರದಿಂದ ಸಂಸದನಾಗಿ ಆಯ್ಕೆಯಾಗಿದ್ದ ಒಪಿ ರವೀಂದ್ರನಾಥ್ರ ಗೆಲುವನ್ನು ಅಸಿಂಧು ಎಂದು ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದೆ.
ರವೀಂದ್ರನಾಥ್ ಎಐಎಡಿಎಂಕೆ ಉಚ್ಛಾಟಿತ ನಾಯಕನಾಗಿದ್ದು, ತಮಿಳುನಾಡು ಮಾಜಿ ಸಿಎಂ ಓ.ಪನ್ನೀರಸೆಲ್ವಂ ಪುತ್ರರಾಗಿದ್ದಾರೆ. ಗುರುವಾರ ಡಿಎಂಕೆ ನಾಯಕ ಮಿಲಾನಿ ಸಲ್ಲಿಸಿದ್ದ ಅರ್ಜಿ ಕೈಗೆತ್ತಿಕೊಂಡ ನ್ಯಾಯಾಲಯವು ರವೀಂದ್ರನಾಥ್ ಗೆಲುವನ್ನು ಅನುರ್ಜಿತ ಎಂದು ಘೋಷಿಸಿದೆ.
ಚುನಾವಣೆಯಲ್ಲಿ ಗೆಲುವು ಸಾಧಿಸಲು ರವೀಂದ್ರನಾಥ್ ಮತದಾರರಿಗೆ ಅಕ್ರಮವಾಗಿ ಹಣ ಹಂಚಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು. ಚುನಾವಣಾ ಅಫಿಡವಿಟ್ನಲ್ಲಿ ಆರೋಪಿ ರವೀಂದ್ರನಾಥ್ ತನ್ನ ಆದಾಯದ ಮೂಲಗಳ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ ಜುಲೈನಲ್ಲಿ ಎಐಎಡಿಎಂಕೆ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಉಚ್ಚಾಟನೆ ಮಾಡಿದ್ದ ತಂದೆ ಮತ್ತು ಮಗನ ಜೋಡಿಗೆ ಈ ತೀರ್ಪು ಹಿನ್ನಡೆಯಾಗಿದೆ.