ಆನ್ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ಟೈಪಿಂಗ್ ದೋಷಗಳು ಹೆಚ್ಚಾಗಿ ಕಂಡುಬರುತ್ತವೆ. ತಪ್ಪಾದ ಕಾಗುಣಿತ, ಜನ್ಮ ದಿನಾಂಕ ಮತ್ತು ನಿವಾಸದ ವಿಳಾಸದಲ್ಲಿ ತಪ್ಪುಗಳು ತುಂಬಾ ಸಾಮಾನ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಯಾವುದೇ ಕಾಗುಣಿತ ತಪ್ಪು ಇಲ್ಲದಂತೆ ಮತ್ತು ಭರ್ತಿ ಮಾಡಬೇಕಾದ ಅಂಶಗಳನ್ನು ಖಾಲಿ ಬಿಡದಂತೆ ನೋಡಿಕೊಳ್ಳಬೇಕು.
ತಪ್ಪು ದಾಖಲೆ
ಅರ್ಜಿದಾರರು ಫಾರ್ಮ್ ಅನ್ನು ಭರ್ತಿ ಮಾಡುವಾಗ ಪಾಸ್ಪೋರ್ಟ್ ಕಛೇರಿಯಿಂದ ಅಧಿಕೃತವಾಗಿ ಪಟ್ಟಿ ಮಾಡದಿರುವ ತಪ್ಪು ಅಥವಾ ನಕಲು ದಾಖಲೆಗಳನ್ನು ಹಾಕುತ್ತಾರೆ. ಉದಾಹರಣೆಗೆ ವಿಳಾಸದ ಪುರಾವೆಯನ್ನು ಕೇಳಿದರೆ ನೀವು ಆಧಾರ್ ಕಾರ್ಡ್, ನೀರಿನ ಬಿಲ್, ಪೋಸ್ಟ್-ಪೇಯ್ಡ್ ಟೆಲಿಫೋನ್ ಬಿಲ್, ವಿದ್ಯುತ್ ಬಿಲ್, ತೆರಿಗೆ ಮೌಲ್ಯಮಾಪನ ಬಿಲ್ ಇತ್ಯಾದಿಗಳನ್ನು ಸೇರಿಸಬಹುದು. ಪಾಸ್ಪೋರ್ಟ್ ಕಚೇರಿಯ ಅನುಮೋದಿತ ಪಟ್ಟಿಯಲ್ಲಿ ಸೇರಿಸದ ದಾಖಲೆಗಳನ್ನು ಲಗತ್ತಿಸಬೇಡಿ.
ಹೊಂದಾಣಿಕೆಯಾಗದ ಸಹಿ
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಲ್ಲಿಸಿದ ವಿವಿಧ ದಾಖಲೆಗಳಲ್ಲಿ ಅರ್ಜಿದಾರರ ಸಹಿ ಹೊಂದಿಕೆಯಾಗದ ಹಲವು ಪ್ರಕರಣಗಳಿವೆ. ಈ ಸಂದರ್ಭದಲ್ಲಿ ನಿಮ್ಮ ಒಂದೇ ರೀತಿಯ ಸಹಿ ಇರುವ ದಾಖಲೆಗಳ ನಕಲನ್ನು ಲಗತ್ತಿಸಿ. ಇದಲ್ಲದೆ ನೀವು ಸಹಿ ಮಾಡಿರುವ ಕಾಗದವನ್ನು ನಿಮ್ಮ ಬಳಿ ಇರಿಸಿಕೊಳ್ಳಿ. ಇದರಿಂದ ನೀವು ಹೇಗೆ ಸಹಿ ಮಾಡಿದ್ದೀರಿ ಎಂಬುದನ್ನು ಭವಿಷ್ಯದಲ್ಲಿ ನೀವು ನೆನಪಿಸಿಕೊಳ್ಳುತ್ತೀರಿ.
ಪಾವತಿಸದ ಬಿಲ್ಗಳು
ಅನೇಕ ಪಾಸ್ಪೋರ್ಟ್ಗಳನ್ನು ತಿರಸ್ಕರಿಸಲು ಪ್ರಾಥಮಿಕ ಕಾರಣವೆಂದರೆ ಪಾವತಿ ಮಾಡದಿರುವುದು ಅಥವಾ ಬಿಲ್ಗಳ ವಿಳಂಬ ಪಾವತಿ. ಲಗತ್ತಿಸಲಾಗಿರುವ ನಿಮ್ಮ ನೀರು, ವಿದ್ಯುತ್, ಮೊಬೈಲ್ ಫೋನ್ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ಗಳ ಇತ್ಯಾದಿಗಳ ನಕಲು ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತದೆ. ಬಿಲ್ ಪಾವತಿಯಲ್ಲಿ ಅವ್ಯವಹಾರ ಅಥವಾ ದೊಡ್ಡ ಸಾಲಗಳಲ್ಲಿನ ಅಕ್ರಮಗಳು ನಿಮ್ಮ ಮೇಲೆ ಪಾಸ್ಪೋರ್ಟ್ ಕಚೇರಿಯಲ್ಲಿ ಅನುಮಾನ ಮೂಡಲು ಕಾರಣವಾಗುತ್ತದೆ. ಇದರಿಂದಾಗಿ ಅನೇಕ ಬಾರಿ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
ಬ್ಲರ್ ಫೋಟೋಕಾಪಿ
ಅಪ್ಲಿಕೇಶನ್ ಪ್ರಕ್ರಿಯೆಯಲ್ಲಿ ಸಲ್ಲಿಸಲಾದ ದಾಖಲೆಗಳ ಅನೇಕ ಫೋಟೊಕಾಪಿಗಳು ತಪ್ಪಾಗಿ ಮುದ್ರಿತವಾಗಿರುತ್ತವೆ. ಅತಿ ಕಪ್ಪು ಮತ್ತು ಅಸ್ಪಷ್ಟವಾಗಿರುತ್ತವೆ. ಈ ಕಾರಣದಿಂದಾಗಿ ಪಾಸ್ಪೋರ್ಟ್ ಕಚೇರಿಯು ನಿಮ್ಮ ವಿವರಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ನೀವು ಲಗತ್ತಿಸುವ ಯಾವುದೇ ಡಾಕ್ಯುಮೆಂಟ್ ಸ್ಪಷ್ಟವಾಗಿರುವಂತೆ ನೋಡಿಕೊಳ್ಳಿ.