ರಾಮನಗರ : ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅತಿವೇಗದ ಚಾಲನೆ ಮಾಡುವವರ ವಿರುದ್ಧ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಒಂದೇ ದಿನ 44 ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ನಿಗದಿತ ವೇಗದ ಮಿತಿಯನ್ನು ಮೀರಿದ ವಾಹನ ಚಾಲಕರ ವಿರುದ್ಧ ರಾಮನಗರ ಪೊಲೀಸರು ಜುಲೈ 4 ರಂದು ಸ್ಪೀಡ್ ರಾಡಾರ್ ಗನ್ಗಳನ್ನು ಬಳಸಿ 44 ಪ್ರಕರಣಗಳನ್ನು ದಾಖಲಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಲಘು ಮೋಟಾರು ವಾಹನಗಳು ಮತ್ತು ಬಸ್ಸುಗಳ ಎಕ್ಸ್ಪ್ರೆಸ್ವೇಗಳಲ್ಲಿ ಗರಿಷ್ಠ ವೇಗದ ಮಿತಿ ಗಂಟೆಗೆ 100 ಕಿ.ಮೀ. ಓವರ್ ಟೇಕ್ ಮಾಡುವ ವೇಗದ ಮಿತಿಯನ್ನು ಗಂಟೆಗೆ 120 ಕಿ.ಮೀ ಎಂದು ನಿಗದಿಪಡಿಸಲಾಗಿದೆ.
120 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಾಲನೆ ಮಾಡುವವರ ವಿರುದ್ಧ ಹದ್ದಿನ ಕಣ್ಣೀಟ್ಟಿರುವ ಪೊಲೀಸರು ಒಂದೇ ದಿನ 44 ಪ್ರಕರಣಗಳನ್ನು ದಾಖಲಿಸಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಜನವರಿ 1 ಮತ್ತು ಜೂನ್ 25 ರ ನಡುವೆ ವಿವಿಧ ಅಪಘಾತ ಪ್ರಕರಣಗಳಲ್ಲಿ 58 ಮಂದಿ ಸಾವನ್ನಪ್ಪಿದ್ದು, 147 ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಪೀಡ್ ಲಿಮಿಟ್ ಗೆ ಕ್ರಮ ವಹಿಸಿದ್ದಾರೆ.