ದಾವಣಗೆರೆ : ದಾವಣಗೆರೆಯಲ್ಲಿ ಹೊಸ ವಂದೇ ಭಾರತ್ ರೈಲಿಗೆ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಕ್ಕಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜುಲೈ 1ರಂದು ದಾವಣಗೆರೆ ನಗರದ ಹೊರವಲಯದ ಜಿಎಂಐಟಿ ಹಿಂಭಾಗದಲ್ಲಿ ಈ ಘಟನೆ ನಡೆದಿತ್ತು. ಕಲ್ಲು ಹೊಡೆದ ಪರಿಣಾಮ ರೈಲಿನ ಕಿಟಕಿಯ ಗಾಜಿಗೆ ಹಾನಿಯಾಗಿತ್ತು.
ಈ ಇಬ್ಬರು ಮಕ್ಕಳು ದಾವಣಗೆರೆಯ ಎಸ್ಎಸ್ ನಗರ ಹಾಗೂ ಭಾಷಾ ನಗರದವರು ಎಂದು ತಿಳಿದು ಬಂದಿದೆ. ಕಲ್ಲೆಸೆದ ನಂತರ ಇಬ್ಬರು ಮಕ್ಕಳು ಎಸ್ಕೇಪ್ ಆಗಿದ್ದರು. ಸದ್ಯ ದಾವಣಗೆರೆ ರೈಲ್ವೆ ಪೊಲೀಸರು ಸದ್ಯ ಇಬ್ಬರನ್ನು ಚಿತ್ರದುರ್ಗದ ಬಾಲಮಂದಿರದಲ್ಲಿ ಇರಿಸಿದ್ದಾರೆ. ಕುರಿತು ರೈಲ್ವೆ ಆರ್ಪಿಎಫ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.