ಬೆಂಗಳೂರು : ಪಡಿತರ ಚೀಟಿದಾರರಿಗೆ ಪಡಿತರ ವಿತರಕರು ಶಾಕ್ ನೀಡಿದ್ದು, ಜುಲೈ 13 ರವರೆಗೆ ಪಡಿತರ ಅಕ್ಕಿ ವಿತರಣೆ ಮಾಡುವುದಿಲ್ಲ ಎಂದು ಸರ್ಕಾರಿ ಪಡಿತರ ವಿತರಕರು ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಪದಾಧಿಕಾರಿಗಳು, ವಿವಿಧ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಸಭೆ ನಡೆಸಿದ್ದು, ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ಕೊಡುವುದಕ್ಕೆ ವಿತರಕರು ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ಆಹಾರ ಪದಾರ್ಥಗಳ ಬದಲಾಗಿ ಪಡಿತರ ಚೀಟಿದಾರರಿಗೆ ಹಣ ನೀಡಿದರೆ ಪಡಿತರ ವಿತರಕರಿಗೆ ಕಮಿಷನ್ ಕಡಿಮೆ ಆಗಲಿದೆ. ಆದ್ದರಿಂದ ಅಧಿವೇಶನದಲ್ಲಿ ಚರ್ಚಿಸಿ ವಿತರಕರಿಗೆ ಕಮಿಷನ್ ಹೆಚ್ಚಳ ಮಾಡಬೇಕು. ಅಲ್ಲಿವರೆಗೆ ಗೋದಾಮಿನಿಂದ ಅಕ್ಕಿ ಎತ್ತುವಳಿ ಮಾಡುವುದನ್ನು ನಿಲ್ಲಿಸಲು ವಿತರಕರ ಸಂಘ ತೀರ್ಮಾನಿಸಿದೆ.