ಬೆಂಗಳೂರು : ಡಿ.ಕೆ ಶಿವಕುಮಾರ್ ಈಗಾಗಲೇ ಸಿಎಂ ಕುರ್ಚಿಗೆ ಟವೆಲ್ ಹಾಕಿದ್ದಾರೆ ಎಂದು ಮಾಜಿ ಸಿಎಂ H.D ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ವಿಧಾನಸೌದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ H.D ಕುಮಾರಸ್ವಾಮಿ ನನ್ನ ಕಾಲದಲ್ಲಿ ನಡೆದ ಎಲ್ಲಾ ವರ್ಗಾವಣೆಯನ್ನು ತನಿಖೆ ಮಾಡಲಿ.. ವರ್ಗಾವಣೆ ಧಂದೆಗೆ ಹಣ ನಿಗದಿ ಮಾಡಿದ್ದಾರೆ ಅಂತ ಗೊತ್ತಿದೆ. ಸಮಯ ಬಂದಾಗ ದಾಖಲೆ ಕೊಡುತ್ತೇನೆ ಎಂದರು. ಈಗಾಗಲೇ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಅಂತ ಕೆಲವರು ಹೇಳ್ತದ್ದಾರೆ. ಇತ್ತ ಡಿಕೆ ಶಿವಕುಮಾರ್ ಕೂಡ ಕುರ್ಚಿ ಮೇಲೆ ಟವೆಲ್ ಹಾಕಿದ್ದಾರೆ. ಸರ್ಕಾರ ಎಷ್ಟು ದಿನ ಇರುತ್ತೆ ಅಂತ ನೋಡೋಣ ಎಂದು ಹೇಳಿದರು.
ಬಿಜೆಪಿ ಸರ್ಕಾರವಿದ್ದಾಗ ಎರಡು ವರ್ಷಗಳಿಂದ ನಿರಂತರವಾಗಿ ಕಾಂಗ್ರೆಸ್ ನವರು ಆರೋಪ ಮಾಡಿದರು. ದಾಖಲೆ ಕೊಡಿ ಅಂದರೆ ಕೊಡಲಿಲ್ಲ, ಈಗ ನನಗೆ ದಾಖಲೆ ಕೇಳುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ.ಸಿಎಂ ಗೃಹಕಚೇರಿಯಲ್ಲಿಯೇ ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ನನ್ನ ಬಳಿ ದಾಖಲೆ ಇದೆ. ದಾಖಲೆ ಕೊಡಲು ನಾನು ಸಿದ್ಧ ತನಿಖೆ ನಡೆಸುವ ಧಮ್ ಇವರಿಗಿದ್ಯಾ? ದಾಖಲೆ ಕೊಟ್ಟ ಮೇಲೆ ಯಾವ ಮಂತ್ರಿಯ ಅಡಿಯಲ್ಲಿ ಕಮಿಷನ್ ದಂಧೆ ನಡೆದಿದೆ. ಆ ಮಂತ್ರಿ ವಜಾ ಮಾಡಲು ನಿಮಗೆ ತಾಕತ್ತಿದೆಯೇ? ಎಂದು ಪ್ರಶ್ನಿಸಿದರು.
ಪ್ರತಿದಿನ ತನಿಖೆ, ತನಿಖೆ ಎಂದು ಗುಮ್ಮ ಕೂರಿಸುತ್ತಿದ್ದಾರೆ. ನನ್ನ ಕಾಲದಲ್ಲಿ ನಡೆದ ವರ್ಗಾವಣೆ ಬಗ್ಗೆಯೂ ತನಿಖೆಯಾಗಲಿ ಎಂದು ಸವಾಲು ಹಾಕಿದರು. ಇನ್ನು ಹನಿಮೂನ್ ಪೀರಿಯಡ್ ಎಂದು ಹೇಳುತ್ತಿದ್ದೀರಿ. ಅಧಿಕಾರಕ್ಕೆ ಬಂದು ಒಂದುವರೆ ತಿಂಗಳಿಗೆ ಕಾಂಗ್ರೆಸ್ ನಿಂದ ಹಗಲು ದರೋಡೆ ನಡೆಯುತ್ತಿದೆ. ವರ್ಗಾವಣೆ ದಂಧೆಗೆ ಎಷ್ಟು ಹಣ ನಿಗದಿ ಮಾಡಿದ್ದೀರಿ ಎಂದು ಗೊತ್ತಿದೆ. ಟೈಂ ಬಂದಾಗ ದಾಖಲೆ ಕೊಡುತ್ತೆನೆ. ಸದನದಲ್ಲಿಯೇ ನೀಡುತ್ತೇನೆ ಎಂದು ಗುಡುಗಿದ್ದಾರೆ.