
ಮುಂದಿನ ಆದೇಶದವರೆಗೆ ಎಸ್ ಜೆ ಎಮ್ ವಿದ್ಯಾಪೀಠ,ಮುರುಘಾ ಮಠಕ್ಕೆ ಆಡಳಿತಾಧಿಕಾರಿಯಾಗಿ ತಾತ್ಕಾಲಿಕವಾಗಿ ನೇಮಕವಾಗಿದ್ದಾರೆ.ಮುರುಘಾ ಮಠಕ್ಕೆ ತಾತ್ಕಾಲಿಕ ಆಡಳಿತಾಧಿಕಾರಿ ನೇಮಿಸಿ ಹೈಕೋರ್ಟ್ ವಿಭಾಗೀಯ ಪೀಠದ ಆದೇಶ ಹಿನ್ನೆಲೆ ಚಿತ್ರದುರ್ಗದ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಅಧಿಕಾರ ಸ್ವೀಕಾರ ಮಾಡಿದರು .
ನಿವೃತ್ತ ಐಎಎಸ್ ಅಧಿಕಾರಿ ಪಿಎಸ್ ವಸ್ತ್ರದ್ ಅವರು ನ್ಯಾ.ಪ್ರೇಮಾವತಿ ಮನಗೂಳಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.ಅಧಿಕಾರ ಸ್ವೀಕಾರ ಮಾಡಿ ನಂತರ ಮಾತನಾಡಿದ ಅವರು ‘ಕೋರ್ಟ್ ನಿರ್ದೇಶನದ ಮೇರೆಗೆ ಮುರುಘಾ ಮಠದ ತಾತ್ಕಲಿಕ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದೇನೆ. ನ್ಯಾಯಾಲಯದ ಮುಂದಿನ ಆದೇಶದವರೆಗೆ ಈ ಅಧಿಕಾರದಲ್ಲಿ ಮುಂದುವರಿಯತ್ತೇನೆ ಎಂದು ಹೇಳಿದರು.

