ಜೀವನದಲ್ಲಿ ಯಾವುದರ ಬಗ್ಗೆಯೂ ಖಚಿತತೆ ಇಲ್ಲ. ಆದರೆ ಸಾವು ಅನ್ನೋದು ಮಾತ್ರ ನಿಶ್ಚಿತ. ಆದರೆ ಇಲ್ಲೊಬ್ಬ ಮಹಿಳೆಯು ತನ್ನ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಏಕಾಏಕಿ ಎಚ್ಚರಗೊಂಡಿದ್ದು ಕುಟುಂಬಸ್ಥರು ಶಾಕ್ ಆಗಿದ್ದಾರೆ. ಜೂನ್ 29ರಂದು ಥಾಯ್ಲೆಂಡ್ನ ಉಡಾನ್ ಥಾನಿ ಪ್ರಾಂತ್ಯದಲ್ಲಿ ಇಂತಹದ್ದೊಂದು ಘಟನೆ ಸಂಭವಿಸಿದೆ. ಆಸ್ಪತ್ರೆಯಲ್ಲಿ ಮೃತ ಎಂದು ಘೋಷಿಸಲಾದ ಮಹಿಳೆ ಶವವನ್ನು ಆಸ್ಪತ್ರೆಯಿಂದ ರವಾನೆ ಮಾಡಲಾಗಿತ್ತು. ವೈದ್ಯರು 49 ವರ್ಷದ ಮಹಿಳೆ ಉಸಿರಾಟ ಶಾಶ್ವತವಾಗಿ ಬಂದ್ ಆಗಿತ್ತು ಎಂದು ಹೇಳಿದ್ದಾರೆ.
ಮೃತ ಮಹಿಳೆಯ ವೃದ್ಧ ತಾಯಿ ತನ್ನ ಸಂಬಂಧಿಕರಿಗೆ ಕರೆ ಮಾಡಿ ಆಕೆಯು ಇನ್ನು ಹೆಚ್ಚು ಹೊತ್ತು ಬದುಕೋದಿಲ್ಲ ಎಂಬ ವಿಚಾರವನ್ನು ತಿಳಿಸಿದ್ದರು. ವೈದ್ಯರು ಆಕೆ ಯಕೃತ್ತಿನ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದ್ದರು. ಚಿಕಿತ್ಸೆಯ ಸಂದರ್ಭದಲ್ಲಿ ವೈದ್ಯರು ಆಕೆಯು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದೇ ಹೇಳಿದ್ದರು.
ಆಕೆ ತನ್ನ ಕೊನೆಯ ಕ್ಷಣಗಳನ್ನು ತನ್ನ ಕುಟುಂಬಸ್ಥರೊಂದಿಗೆ ಕಳೆಯಲು ಬಯಸಿದ್ದರು. ಹೀಗಾಗಿ ಆಕೆಯನ್ನು ಮನೆಗೆ ಹಿಂದಿರುಗಿಸಲು ತಾಯಿ ವ್ಯವಸ್ಥೆ ಮಾಡಿದ್ದರು. ಆದರೆ ಮಾರ್ಗಮಧ್ಯದಲ್ಲಿಯೇ ಆಕೆಯ ಉಸಿರಾಟ ನಿಂತು ಹೋಗಿತ್ತು ಎಂದು ವೃದ್ಧ ತಾಯಿ ಮಾಹಿತಿ ನೀಡಿದ್ದಾರೆ.
ಮಹಿಳೆಯ ಸಾವಿನಿಂದ ದುಃಖಿತವಾದ ಕುಟುಂಬವು ಬೌದ್ಧ ಸಂಪ್ರದಾಯದಂತೆ ಆಕೆಯ ಅಂತ್ಯಕ್ರಿಯೆಗೆ ಸಿದ್ಧತೆ ಆರಂಭಿಸಿತ್ತು. ಪೋನ್ಲಾ ದೇಹವನ್ನು ಮನೆಗೆ ಕೊಂಡೊಯ್ಯುವ ಬದಲು ಶವವನ್ನು ರಾತ್ರಿಯಿಡೀ ಫಡುಂಗ್ ಪಟ್ಟಣದ ದೇವಸ್ಥಾನದ ಬಳಿಯಲ್ಲಿ ಇಡಲಾಗಿತ್ತು.