ಬಾಗಲಕೋಟೆ: ಮಳೆ ಇಲ್ಲದ ಕಾರಣ ನದಿಗಳಲ್ಲಿ ನೀರು ಬತ್ತುತ್ತಿದ್ದು, ನೀರು, ಆಹಾರ ಕೊರತೆಯಿಂದ ಮೊಸಳೆಗಳು ಗ್ರಾಮಕ್ಕೆ ಪ್ರವೇಶಿಸತೊಡಗಿವೆ. ಇದರಿಂದಾಗಿ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಆತಂಕ ಉಂಟಾಗಿದೆ.
ನಿನ್ನೆ ಕೊಂತಿಕಲ್ ಗ್ರಾಮಕ್ಕೆ ಸುಮಾರು 9 ಅಡಿ ಉದ್ದದ ಮೊಸಳೆ ಬಂದಿದ್ದು, ಜನ ಅದನ್ನು ಕಟ್ಟಿ ಹಾಕಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆಯನ್ನು ಆಲಮಟ್ಟಿ ಹಿನ್ನೀರಿಗೆ ಬಿಟ್ಟಿದ್ದರು. ಇಂದು ಜಮಖಂಡಿ ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ಬರೋಬ್ಬರಿ 12 ಅಡಿ ಉದ್ದದ ಮೊಸಳೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಅದನ್ನು ಸೆರೆ ಹಿಡಿದಿದ್ದಾರೆ. ನಂತ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆಯನ್ನು ವಶಕ್ಕೆ ಪಡೆದು ಆಲಮಟ್ಟಿ ಡ್ಯಾಮ್ ಹಿನ್ನೀರಿಗೆ ಬಿಟ್ಟಿದ್ದಾರೆ.