2019 ರ ‘ಕಿಸ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶ್ರೀಲೀಲಾ ತಮ್ಮ ಬೋಲ್ಡ್ ಲುಕ್ , ನಟನೆ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕನ್ನಡ ಮತ್ತು ತೆಲುಗು ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುವ ನಟಿ ಶ್ರೀಲೀಲಾ ನಾಲ್ಕು ವರ್ಷಗಳಲ್ಲಿ ಚಲನಚಿತ್ರೋದ್ಯಮದಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ.
ಇತ್ತೀಚೆಗೆ ನಟಿ ಶ್ರೀಲೀಲಾಗೆ ಒಂದು ಪ್ರಮುಖ ಚಿತ್ರದಲ್ಲಿ ನಟಿಸುವ ಆಫರ್ ನೀಡಲಾಯಿತು, ಆದರೆ ಅವರು ಅದನ್ನು ರಿಜೆಕ್ಟ್ ಮಾಡಿದರು. ಚಲನಚಿತ್ರ ನಿರ್ಮಾಪಕರು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರೆ 10 ಕೋಟಿ ರೂ.ಗಳ ಸಂಭಾವನೆ ನೀಡುವುದಾಗಿ ಹೇಳಿದರು. ಆದರೆ ನಾನು ಆ ಪಾತ್ರ ಮಾಡಲ್ಲ ಎಂದು ನಟಿ ಶ್ರೀಲೀಲಾ ಖಡಾ ಖಂಡಿತವಾಗಿಯೇ ಹೇಳಿದ್ದಾರಂತೆ. 100 ಕೋಟಿ ರೂ.ಗಳನ್ನು ಕೊಟ್ಟರೂ ನಾನು ಬೋಲ್ಡ್ ಪಾತ್ರ ಮಾಡಲ್ಲ ಎಂದು ನಟಿ ಶ್ರೀಲೀಲಾ ಖಡಕ್ ಆಗಿ ಹೇಳಿದ್ದಾರೆ ಎಂದು ವರದಿಗಳು ತಿಳಿಸಿದೆ.
ಎಂದಿಗೂ ಕೂಡ ಬೋಲ್ಡ್ ಕಂಟೆಂಟ್ ಹೊಂದಿರುವ ಚಿತ್ರದಲ್ಲಿ ಪಾತ್ರವನ್ನು ಒಪ್ಪಿಕೊಳ್ಳುವುದಿಲ್ಲ. ನಟನೆ, ಪಾತ್ರಕ್ಕೆ ಸಂಬಂಧಿಸಿದಂತೆ ನನಗೆ ಒಂದು ಗಡಿ ಇದೆ ಅದನ್ನು ನಾನು ಎಂದಿಗೂ ದಾಟುವುದಿಲ್ಲ, ಅಂತಹ ದೃಶ್ಯ ಮಾಡಬೇಕು ಅಂದ್ರೆ ಸಿನಿಮಾವನ್ನೇ ಬಿಟ್ಟು ಬಿಡುವುದಾಗಿ ಶ್ರೀಲೀಲಾ ಹೇಳಿದ್ದಾರೆ ಎನ್ನಲಾಗಿದೆ.