BMW Motorrad ಭಾರತೀಯ ಮಾರುಕಟ್ಟೆಯಲ್ಲಿ ಎಲ್ಲಾ ಹೊಸ M 1000 RR ಅನ್ನು ಬಿಡುಗಡೆ ಮಾಡಿದೆ. 2023 BMW M 1000 RR ಅನ್ನು ಭಾರತದಲ್ಲಿ 49 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಬೈಕ್ನ ಉನ್ನತ ರೂಪಾಂತರದ ಬೆಲೆ 55 ಲಕ್ಷ ರೂಪಾಯಿ.
ಇದು ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ – ಸ್ಟ್ಯಾಂಡರ್ಡ್ ಮತ್ತು ಕಾಂಪಿಟೇಶನ್. ಇವುಗಳ ಬೆಲೆ ಕ್ರಮವಾಗಿ 49 ಲಕ್ಷ ಮತ್ತು 55 ಲಕ್ಷ ರೂಪಾಯಿ. ಅಂದರೆ ಟಾಪ್-ಸ್ಪೆಕ್ ರೂಪಾಂತರದ ಬೆಲೆ ಮೂಲ ರೂಪಾಂತರಕ್ಕಿಂತ 6 ಲಕ್ಷ ರೂಪಾಯಿಯಷ್ಟು ಅಧಿಕ.
M 1000 RR ಭಾರತದಲ್ಲಿ ಮಾರಾಟಕ್ಕೆ ಲಭ್ಯವಿರುವ ಅತ್ಯಂತ ದುಬಾರಿ BMW ಮೋಟಾರ್ ಸೈಕಲ್. ಇದು ಅತ್ಯಂತ ಶಕ್ತಿಶಾಲಿ ಬೈಕ್. ಈಗಾಗ್ಲೇ ಈ ಮೋಟಾರ್ ಸೈಕಲ್ ಕೊಳ್ಳುವ ಆಸಕ್ತರಿಗಾಗಿ ಬುಕ್ಕಿಂಗ್ಗಳು ತೆರೆದಿವೆ. ಈ ವರ್ಷದ ನವೆಂಬರ್ನಲ್ಲಿ ಮೋಟಾರ್ ಸೈಕಲ್ ವಿತರಣೆಗಳು ಪ್ರಾರಂಭವಾಗುತ್ತವೆ. BMW M 1000 RR BMWನ ShiftCam ತಂತ್ರಜ್ಞಾನವನ್ನು ಹೊಂದಿದೆ.
999 cc, ನಾಲ್ಕು-ಸಿಲಿಂಡರ್, ನೀರು ಮತ್ತು ಆಯಿಲ್ -ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 14,500 RPM ನಲ್ಲಿ 210 bhp ಮತ್ತು 11,000 RPM ನಲ್ಲಿ 113 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ಗೆ ಜೋಡಿಸಲಾಗಿದೆ. ಇದು 3.1 ಸೆಕೆಂಡ್ಗಳಲ್ಲಿ 0 ರಿಂದ 100 ಕಿಮೀ ವೇಗವನ್ನು ಪಡೆಯಬಲ್ಲದು.
314 ಕಿಮೀ ಪ್ರತಿ ಗಂಟೆಯಷ್ಟು ಗರಿಷ್ಠ ವೇಗವನ್ನು ಹೊಂದಿದೆ. ಹೊಸ BMW M 1000 RR ನೊಂದಿಗೆ, BMW Motorrad ಸೂಪರ್ ಬೈಕ್ ವಿಭಾಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎನ್ನುತ್ತಾರೆ ಕಂಪನಿಯ ಅಧಿಕಾರಿಗಳು. ಬೈಕ್ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ ಈ ಮೋಟಾರ್ ಸೈಕಲ್. ಲುಕ್ ಕೂಡ ಅಧ್ಬುತವಾಗಿದೆ.