HomeCrimeBIG NEWS: ಬೆಂಗಳೂರಿಗೆ ಬಂದಿದ್ದ ವ್ಯಕ್ತಿ ಕಿಡ್ನ್ಯಾಪ್ ಮಾಡಿ 18 ಸಾವಿರ ಹಣ ದೋಚಿದ ಪ್ರಕರಣ;...

BIG NEWS: ಬೆಂಗಳೂರಿಗೆ ಬಂದಿದ್ದ ವ್ಯಕ್ತಿ ಕಿಡ್ನ್ಯಾಪ್ ಮಾಡಿ 18 ಸಾವಿರ ಹಣ ದೋಚಿದ ಪ್ರಕರಣ; ಇಬ್ಬರು ಆರೋಪಿಗಳು ಅರೆಸ್ಟ್

ಬೆಂಗಳೂರು: ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯೋರ್ವರನ್ನು ಅಪಹರಿಸಿ 18 ಸಾವಿರ ರೂಪಾಯಿ ಹಣ, ಮೊಬೈಲ್, ಪರ್ಸ್ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಯಶವಂತ್ ಹಾಗೂ ನಂದೀಶ್ ಬಂಧಿತ ಆರೋಪಿಗಳು. ಜೂನ್ 19ರಂದು ಬೆಳಗಿನ ಜಾವ 3ಗಂಟೆ ಸುಮಾರಿಗೆ ಹಾಸನದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯೊಬ್ಬರು ವಾಹನ ಇಳಿದು ಗಿರಿನಗರದ ಬಳಿ ಹೋಗುತ್ತಿದ್ದಾಗ ಆಟೋದಲ್ಲಿ ಬಂದ ಐವರ ತಂಡ ಅವರನ್ನು ಅಪಹರಿಸಿ, ಹಣ, ಮೊಬೈಲ್, ಪರ್ಸ್ ಕಿತ್ತುಕೊಂಡು ಆಶ್ರಮವೊಂದರ ಬಳಿ ಬಿಟ್ಟು ಪರಾರಿಯಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂತ್ರಸ್ತ ವ್ಯಕ್ತಿ ಗಿರಿನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ಸಂಬಂಧ ಗಿರಿನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಮೂವರಿಗಾಗಿ ಶೋಧ ನಡೆಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular