
ಉಪ್ಪಿಟ್ಟು ಎಂದರೆ ಮೂಗು ಮುರಿಯುವವರೇ ಹೆಚ್ಚು. ರವೆ ಉಪ್ಪಿಟ್ಟಿನ ರೂಪ ಬದಲಾಯಿಸಿ ರೊಟ್ಟಿ ಮಾಡಿ ನೋಡಿ. ಆಹಾ! ಎಂದು ಚಪ್ಪರಿಸಿ ರವೆ ರೊಟ್ಟಿ ತಿನ್ನಬಹುದು. ರವೆ ರೊಟ್ಟಿ ಮಾಡಲು ಬಹಳ ಕಡಿಮೆ ಪದಾರ್ಥಗಳೇ ಸಾಕು.
ಹುರಿಯದ ಹಸಿ ರವೆ – 1 ದೊಡ್ಡ ಕಪ್
 ಮೊಸರು – ಅರ್ಧ ಕಪ್
 ಜೀರಿಗೆ – ಅರ್ಧ ಚಮಚ
 ಕ್ಯಾರೆಟ್ ಮತ್ತು ಕಾಯಿ ತುರಿ – ತಲಾ ಅರ್ಧ ಕಪ್
 ಹಸಿ ಮೆಣಸಿನಕಾಯಿ ಪೇಸ್ಟ್ – 1 ಚಮಚ
 ಕೊತ್ತಂಬರಿ ಸೊಪ್ಪು – ಸ್ವಲ್ಪ
 ಉಪ್ಪು – ರುಚಿಗೆ ಬೇಕಾದಷ್ಟು.
ರವೆ ರೊಟ್ಟಿ ಮಾಡುವ ವಿಧಾನ
ರವೆ, ಮೊಸರು, ಕಾಯಿ ಮತ್ತು ಕ್ಯಾರೆಟ್ ತುರಿ, ಹಸಿ ಮೆಣಸಿನಕಾಯಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಉಪ್ಪು ಎಲ್ಲವನ್ನು ಮಿಕ್ಸ್ ಮಾಡಿ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ರೊಟ್ಟಿ ಹಿಟ್ಟು ತಯಾರಿಸಿಕೊಳ್ಳಿ.
10 ರಿಂದ 15 ನಿಮಿಷ ನೆನೆಯಲು ಬಿಡಿ. ನಂತರ ಕಾದ ಕಾವಲಿಯ ಮೇಲೆ ಎರಡೂ ಬದಿ ರೊಟ್ಟಿ ಹಿಟ್ಟು ತಟ್ಟಿ ಎಣ್ಣೆ ಹಚ್ಚಿ ಹದವಾಗಿ ಬೇಯಿಸಿ.
 ತಯಾರಾದ ರವೆ ರೊಟ್ಟಿಗೆ ಟೊಮೋಟೊ ಗೊಜ್ಜು ಒಳ್ಳೆಯ ಕಾಂಬಿನೇಶನ್.

 
		 
		 
		 
		 Loading ...
 Loading ... 
		 
		 
		