ನವದೆಹಲಿ: ತೊಗರಿ ಬೆಲೆ ಏರಿಕೆ ತಪ್ಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಆಮದು ಮಾಡಿಕೊಂಡ ತೊಗರಿ ಮಾರುಕಟ್ಟೆಗೆ ಬರುವವರೆಗೆ ಬೆಲೆ ಏರಿಕೆ ತಡೆಯಲು ದಾಸ್ತಾನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.
ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಈ ಕುರಿತಾಗಿ ನಾಫೆಡ್ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟಕ್ಕೆ ಈ ಕುರಿತು ಸೂಚನೆ ನೀಡಿದೆ. ಜೂನ್ 2ರಂದು ಅಗತ್ಯ ಸರಕುಗಳ ಕಾಯ್ದೆ ಜಾರಿಗೊಳಿಸುವ ಮೂಲಕ ತೊಗರಿ ಮತ್ತು ಉದ್ದಿನ ಮೇಲೆ ದಾಸ್ತಾನು ಮಿತಿ ಹೇರಲಾಗಿತ್ತು. ಈ ಆದೇಶದ ಅನ್ವಯ ಎಲ್ಲಾ ರಾಜ್ಯಗಳಿಗೆ ಅಕ್ಟೋಬರ್ 31ರವರೆಗೆ ತೊಗರಿ ಮತ್ತು ಉದ್ದಿನ ದಾಸ್ತಾನು ಮಿತಿ ನಿಗದಿಪಡಿಸಲಾಗಿದೆ. ಸಗಟು ವ್ಯಾಪಾರಿಗಳಿಗೆ 200 ಮೆಟ್ರಿಕ್ ಟನ್, ಚಿಲ್ಲರೆ ವ್ಯಾಪಾರಿಗಳಿಗೆ 5 ಮೆಟ್ರಿಕ್ ಟನ್ ಬೇಳೆ ಕಾಳು ದಾಸ್ತಾನು ಇಟ್ಟುಕೊಳ್ಳಲು ಅವಕಾಶವಿದೆ.
ಬೆಲೆ ಏರಿಕೆ ತಪ್ಪಿಸಲು ದಾಸ್ತಾನಿನಿಂದ ತೊಗರಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಆಮದು ಮಾಡಿಕೊಂಡ ತೊಗರಿ ಮಾರುಕಟ್ಟೆಗೆ ಬರುವವರೆಗೆ ಬೆಲೆ ಏರಿಕೆ ತಪ್ಪಿಸಲು ಈ ಕ್ರಮದಿಂದ ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.