ಕಲಬುರಗಿ : ಪ್ರಸಕ್ತ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವಾರ್ ಸಿಂಗ್ ಮೀನಾ ಅವರು ಜಿಲ್ಲೆಯ ರೈತ ಬಾಂಧವರಲ್ಲಿ ಮನವಿ ಮಾಡಿದ್ದಾರೆ.
ತಾಲ್ಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ನಿಗದಿ ಮಾಡಿದ್ದು, ಬೆಳೆ ವಿಮೆ ನೋಂದಣಿಗೆ ಕಲಬುರಗಿ ಜಿಲ್ಲೆಗೆ ಯುನಿವರಸಲ್ ಸೊಂಪೊ ಜನರಲ್ ಇನ್ಸುರೆನ್ಸ್ ಕಂಪನಿ ಲಿ. ಬೆಂಗಳೂರು ವಿಮಾ ಸಂಸ್ಥೆಯನ್ನು ಸರ್ಕಾರ ಗುರುತಿಸಿದೆ. ಇನ್ನು 2023-24ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಒಟ್ಟು 22 ಬೆಳೆಗಳಿಗೆ ಇಂಡಿಮ್ನಿಟಿ ಮಟ್ಟ ನೀರಾವರಿ ಬೆಳೆಗಳಿಗೆ ಶೇ.90 ಹಾಗೂ ಮಳೆ ಅಶ್ರಿತ ಬೆಳೆಗಳಿಗೆ ಶೇ.80 ಎಂದು ನಿಗಧಿಪಡಿಸಿದೆ.
ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡ ರೈತರ ಜಮೀನು ಸ್ಧಳ, ನಿರ್ಧಿಷ್ಟ, ಪ್ರಕೃತಿ ವಿಕೋಪ, ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘ ಸ್ಪೋಟ ಹಾಗೂ ಗುಡುಗು ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಘಡ ಸಂದರ್ಭದಲ್ಲಿ ಬೆಳೆ ನಷ್ಟವುಂಟಾದರೆ ವೈಯಕ್ತಿಕ ನಷ್ಟದ ನಿರ್ಧರಣೆಯನ್ನು ವೈಯುಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಈ ಯೋಜನೆಯಡಿ ಪಡೆಯಲು ಅವಕಾಶ ನೀಡಲಾಗಿದೆ.
ಜುಲೈ 31 ರೊಳಗೆ ನೋಂದಣಿ ಮಾಡಬೇಕಾದ ಬೆಳೆ, ಬೆಳೆವಾರು ಪ್ರತಿ ಹೆಕ್ಟೇರ್ ಗರಿಷ್ಠ ವಿಮಾ ಮೊತ್ತ, ರೈತರು ಪಾವತಿಸಬೇಕಾದ ಮೊತ್ತ
ಮುಸುಕಿನ ಜೋಳ(ನೀ) ಬೆಳೆಗೆ ಗರಿಷ್ಠ 64,500 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 1,290 ರೂ. ಪಾವತಿಸಬೇಕು. ಮುಸುಕಿನ ಜೋಳ(ಮ.ಆ) ಬೆಳೆಗೆ ಗರಿಷ್ಠ 56,500 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 1,130 ರೂ. ಪಾವತಿಸಬೇಕು. ಜೋಳ(ನೀ) ಬೆಳೆಗೆ ಗರಿಷ್ಠ 45,250 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 905 ರೂ. ಪಾವತಿಸಬೇಕು. ಜೋಳ(ಮ.ಆ) ಬೆಳೆಗೆ ಗರಿಷ್ಠ 38,250 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 765 ರೂ. ಪಾವತಿಸಬೇಕು. ಸಜ್ಜೆ(ಮ.ಆ) ಬೆಳೆಗೆ ಗರಿಷ್ಠ 31,500 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 630 ರೂ. ಪಾವತಿಸಬೇಕು. ಉದ್ದು (ಮ.ಆ) ಬೆಳೆಗೆ ಗರಿಷ್ಠ 32,750 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 655 ರೂ. ಪಾವತಿಸಬೇಕು. ತೊಗರಿ(ನೀ) ಬೆಳೆಗೆ ಗರಿಷ್ಠ 50,250 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 1,005 ರೂ. ಪಾವತಿಸಬೇಕು. ತೊಗರಿ (ಮ.ಆ) ಬೆಳೆಗೆ ಗರಿಷ್ಠ 48,000 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 960 ರೂ. ಪಾವತಿಸಬೇಕು. ಹೆಸರು (ಮ.ಆ) ಬೆಳೆಗೆ ಗರಿಷ್ಠ 33,250 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 665 ರೂ. ಪಾವತಿಸಬೇಕು. ಸೋಯಾ ಅವರೆ(ಮ.ಆ) ಬೆಳೆಗೆ ಗರಿಷ್ಠ 41,000 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 820 ರೂ. ಪಾವತಿಸಬೇಕು. ಎಳ್ಳು(ಮ.ಆ) ಬೆಳೆಗೆ ಗರಿಷ್ಠ 28,750 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 575 ರೂ. ಪಾವತಿಸಬೇಕು. ನೆಲಗಡಲೆ (ಶೇಂಗಾ) (ನೀ) ಬೆಳೆಗೆ ಗರಿಷ್ಠ 65,750 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 1,315 ರೂ. ಪಾವತಿಸಬೇಕು. ನೆಲಗಡಲೆ(ಶೇಂಗಾ)(ಮ.ಆ) ಬೆಳೆಗೆ ಗರಿಷ್ಠ 54,500 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 1,090 ರೂ. ಪಾವತಿಸಬೇಕು. ಹತ್ತಿ(ನೀ) ಬೆಳೆಗೆ ಗರಿಷ್ಠ 73,750 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 3,688 ರೂ. ಪಾವತಿಸಬೇಕು. ಹತ್ತಿ(ಮ.ಆ) ಬೆಳೆಗೆ ಗರಿಷ್ಠ 49,750 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 2,488 ರೂ. ಪಾವತಿಸಬೇಕು. ಅರಿಶಿಣ ಬೆಳೆಗೆ ಗರಿಷ್ಠ 1,42,250 ರೂ. ವಿಮಾ ಮೊತ್ತ ನಿಗದಿ ಮಾಡಿದ್ದು, ರೈತರು 7,113 ರೂ. ಪಾವತಿಸಬೇಕು. ಈ ಎಲ್ಲಾ ಬೆಳೆಗಳ ಬೆಳೆ ವಿಮೆ ಮಾಡಿಸಲು ದಿ.31-07-2023 ಕೊನೆಯ ದಿನಾಂಕವಾಗಿರುತ್ತದೆ.
ಬೆಳೆ ವಿಮೆ ಕುರಿತು ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ.1800-200-5142, ಹತ್ತಿರದ ರೂತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಜೊತೆಗೆ ಯುನಿವರಸಲ್ ಸೊಂಪೋ ಜೆನೆರಲ್ ಇನ್ಸರೆನ್ಸ್ ಕಂಪನಿ ಲಿ. ಈ ಕೆಳಕಂಡ ತಾಲೂಕುವಾರು ವಿಮಾ ಪ್ರತಿನಿಧಿಗಳನ್ನು ಸಂಪರ್ಕಿಸಲು ಕೋರಿದೆ. ಕಲಬುರಗಿ ಜಿಲ್ಲೆ: 8867508750, 8976889340, ಅಫಜಲಪೂರ-9902356434, ಆಳಂದ-9702944943, ಚಿಂಚೋಳಿ-8095384057, ಕಮಲಾಪೂರ-7259754689, ಯಡ್ರಾಮಿ-9880222988, ಚಿತ್ತಾಪೂರ-7996369510, ಜೇವರ್ಗಿ-9845661193, ಕಲಬುರಗಿ-8147603315, ಸೇಡಂ-7204579007 ಹಾಗೂ ಕಾಳಗಿ-9000481448.