alex Certify ಕೆಂಪು ಟೊಮೆಟೊ ಬದಲು ಹಸಿರು ಟೊಮೆಟೊಗಳನ್ನು ತಿನ್ನಿ, ಇದರಿಂದ ಸಿಗುತ್ತೆ ಆರೋಗ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಂಪು ಟೊಮೆಟೊ ಬದಲು ಹಸಿರು ಟೊಮೆಟೊಗಳನ್ನು ತಿನ್ನಿ, ಇದರಿಂದ ಸಿಗುತ್ತೆ ಆರೋಗ್ಯ…!

ಟೊಮೆಟೊ ನಮ್ಮ ಅಡುಗೆಮನೆಯ ಪ್ರಮುಖ ಭಾಗವಾಗಿದೆ. ಪ್ರತಿ ಮನೆಯಲ್ಲೂ ಅಡುಗೆಗೆ ಟೊಮೆಟೋ ಬಳಸುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಸೇವನೆ ಮಾಡುವುದು ಕೆಂಪನೆಯ ಟೊಮೆಟೋ ಹಣ್ಣುಗಳನ್ನು. ಆದರೆ ಹಸಿರು ಟೊಮೆಟೊಗಳು ಇದಕ್ಕಿಂತಲೂ ಹೆಚ್ಚು ಪ್ರಯೋಜನಕಾರಿ. ಹಸಿರು ಟೊಮೇಟೊ ತಿನಿಸುಗಳ ರುಚಿ ಹೆಚ್ಚಿಸುತ್ತದೆ. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳೂ ಇವೆ.

ಇದು ಜೀವಸತ್ವಗಳು, ಖನಿಜಗಳು ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ. ಕೆಂಪು ಟೊಮೇಟೊ ತಿನ್ನುವವರು ಹಸಿರು ಟೊಮ್ಯಾಟೊದ ಪ್ರಯೋಜನಗಳನ್ನು ಕೇಳಿದರೆ ಆಶ್ಚರ್ಯ ಪಡುತ್ತಾರೆ.ವಾಸ್ತವವಾಗಿ ಹಸಿರು ಟೊಮೇಟೊ ಕೂಡ ಟೊಮೇಟೊದ ಒಂದು ರೂಪವಾಗಿದ್ದು, ಕೆಂಪು ಟೊಮೆಟೊಗಿಂತ ಸ್ವಲ್ಪ ಭಿನ್ನವಾಗಿದೆ.

ಪೌಷ್ಟಿಕಾಂಶದ ವಿಷಯದಲ್ಲಿ ಹಸಿರು ಟೊಮೆಟೊಗಳಿಗೆ ಪೈಪೋಟಿಯೇ ಇಲ್ಲ. ವಿಟಮಿನ್, ಫೈಬರ್, ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣ ಸೇರಿದಂತೆ ಹಲವು ಪೋಷಕಾಂಶಗಳು ಹಸಿರು ಟೊಮೇಟೊದಲ್ಲಿವೆ. ಹಸಿರು ಟೊಮೆಟೊದಲ್ಲಿ ಕಂಡುಬರುವ ಪೋಷಕಾಂಶಗಳು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುವಲ್ಲಿ ಸಹಕಾರಿಯಾಗಿದೆ.ದೃಷ್ಟಿಯಿಂದ ಹಿಡಿದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವವರೆಗೆ, ಹಸಿರು ಟೊಮೆಟೊಗಳು ತುಂಬಾ ಪ್ರಯೋಜನಕಾರಿ.

ಕೆಂಪು ಟೊಮೆಟೊಗಳಿಗೆ ಹೋಲಿಸಿದರೆ ಹಸಿರು ಟೊಮೆಟೊಗಳು ಸ್ವಲ್ಪ ಹುಳಿಯಾಗಿರುತ್ತವೆ. ಕೆಲವರು ಹಸಿರು ಟೊಮೆಟೋದ ಚಟ್ನಿ, ಉಪ್ಪಿನಕಾಯಿ ಮಾಡಲು ಇಷ್ಟಪಡುತ್ತಾರೆ. ಹಸಿರು ಟೊಮೇಟೊ ಸೇವನೆಯಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ವಿಟಮಿನ್ ಸಿ ಮೂಲಹಸಿರು ಟೊಮೆಟೊಗಳು ವಿಟಮಿನ್ ಸಿಯ ಉತ್ತಮ ಮೂಲವಾಗಿದೆ. ಇದು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಫೋಲಿಕ್ ಆಮ್ಲದಲ್ಲಿ ಸಮೃದ್ಧವಾಗಿದೆಹಸಿರು ಟೊಮ್ಯಾಟೊ ಉತ್ತಮ ಪ್ರಮಾಣದ ಫೋಲಿಕ್ ಆಮ್ಲವನ್ನು ಒದಗಿಸುತ್ತದೆ. ಇದು ಗರ್ಭಿಣಿಯರಿಗೆ ಬಹಳ ಮುಖ್ಯ. ಗರ್ಭಾವಸ್ಥೆಯಲ್ಲಿ ಮಗುವಿನ ರಚನೆಗೆ ಇದು ಅವಶ್ಯಕವಾಗಿದೆ ಮತ್ತು ನರವೈಜ್ಞಾನಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಲೈಕೋಪೀನ್ ಮೂಲಹಸಿರು ಟೊಮೆಟೊಗಳಲ್ಲಿ ಲೈಕೋಪೀನ್ ಇರುತ್ತದೆ. ಇದು ಅದಕ್ಕೆ ಕೆಂಪು ಬಣ್ಣವನ್ನು ನೀಡುತ್ತದೆ. ಇದು ಒಂದು ರೀತಿಯ ಕ್ಯಾರೊಟಿನಾಯ್ಡ್ ಆಗಿದ್ದು ಇದನ್ನು ನೈಸರ್ಗಿಕ ವರ್ಣದ್ರವ್ಯವೆಂದು ಪರಿಗಣಿಸಲಾಗುತ್ತದೆ.

ಮೂಳೆಗಳನ್ನು ಬಲಪಡಿಸುತ್ತದೆ – ಮೂಳೆಗಳು ದುರ್ಬಲವಾಗಿದ್ದರೆ, ನಿರಂತರವಾಗಿ ನೋವು ಇದ್ದರೆ ಹಸಿರು ಟೊಮೆಟೊಗಳನ್ನು ಸೇವಿಸಬೇಕು. ವಾಸ್ತವವಾಗಿ ಬಹಳಷ್ಟು ವಿಟಮಿನ್ಗಳು ಹಸಿರು ಟೊಮೆಟೊಗಳಲ್ಲಿ ಕಂಡುಬರುತ್ತವೆ. ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಅವುಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ.

ರಕ್ತದೊತ್ತಡ ನಿಯಂತ್ರಣ – ಹಸಿರು ಟೊಮ್ಯಾಟೊ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಹಸಿರು ಟೊಮೆಟೊಗಳಲ್ಲಿ ಸೋಡಿಯಂ ಪ್ರಮಾಣವು ಕಡಿಮೆ ಮತ್ತು ಪೊಟ್ಯಾಸಿಯಮ್ ಪ್ರಮಾಣವು ಹೆಚ್ಚು.

ಚರ್ಮಕ್ಕೆ ಪ್ರಯೋಜನಕಾರಿಹಸಿರು ಟೊಮೆಟೊಗಳು ನಮ್ಮ ತ್ವಚೆಗೆ ವರವಿದ್ದಂತೆ. ಹಸಿರು ಟೊಮೆಟೊದಲ್ಲಿರುವ ವಿಟಮಿನ್-ಸಿ ತ್ವಚೆಯನ್ನು ದೀರ್ಘಕಾಲದವರೆಗೆ ಯೌವ್ವನಯುಕ್ತವಾಗಿರಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...