ಸ್ಯಾಂಡ್ವಿಚ್, ಟೋಸ್ಟ್, ಸಲಾಡ್, ಸ್ಮೂಥಿ ಹೀಗೆ ಅವಕಾಡೊದಿಂದ ನಾನಾ ಬಗೆಯ ತಿನಿಸುಗಳನ್ನು ಮಾಡಿಕೊಂಡು ಜನರು ಸೇವಿಸ್ತಾರೆ. ಅವಕಾಡೊ ಜನಪ್ರಿಯ ಸೂಪರ್ಫುಡ್ಗಳಲ್ಲೊಂದು. ಈ ಬೆಣ್ಣೆ ಹಣ್ಣು ಅನೇಕ ಪೋಷಕಾಂಶಗಳ ಉಗ್ರಾಣವಾಗಿದೆ. ರುಚಿಕರವಾದ ಮತ್ತು ಪೌಷ್ಟಿಕಾಂಶಭರಿತ ಈ ಹಣ್ಣು ಅತ್ಯಂತ ಆರೋಗ್ಯಕರ ಅನ್ನೋದ್ರಲ್ಲಿ ಅನುಮಾನವಿಲ್ಲ.
ಅವಕಾಡೊ ನಮ್ಮ ಕೂದಲು ಮತ್ತು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಮಧುಮೇಹ, ಕ್ಯಾನ್ಸರ್, ಅಜೀರ್ಣ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ ಈ ಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ಹಾನಿ ಉಂಟಾಗುತ್ತದೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ.
ದಿನಕ್ಕೆ ಅರ್ಧ ಹಣ್ಣನ್ನು ಸೇವನೆ ಮಾಡಬಹುದು ಎನ್ನುತ್ತಾರೆ ತಜ್ಞರು. ವಿವಿಧ ಆರೋಗ್ಯ ಸಮಸ್ಯೆಗಳು, ಜೀವನಶೈಲಿ ಮತ್ತು ವಯಸ್ಸಿನ ಆಧಾರದ ಮೇಲೆ ಅವಕಾಡೊ ಸೇವನೆ ಪ್ರಮಾಣದಲ್ಲಿ ಬದಲಾವಣೆಗಳನ್ನು ಮಾಡಬಹುದು.
ತೂಕ ಹೆಚ್ಚಾಗುವುದು
ಅವಕಾಡೊ ಉತ್ತಮ ಪ್ರಮಾಣದ ಕ್ಯಾಲೊರಿಗಳನ್ನು ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ನೀವು ಹೆಚ್ಚು ಅವಕಾಡೊವನ್ನು ಸೇವಿಸಿದರೆ ತೂಕ ಹೆಚ್ಚಾಗಬಹುದು. ಉತ್ತಮ ಆರೋಗ್ಯಕ್ಕಾಗಿ ಅವಕಾಡೊವನ್ನು ಸರಿಯಾದ ಪ್ರಮಾಣದಲ್ಲಿ ತಿನ್ನಬೇಕು.
ಜೀರ್ಣಕಾರಿ ಸಮಸ್ಯೆಗಳು
ನೀವು ಗ್ಯಾಸ್, ಹೊಟ್ಟೆ ನೋವು ಅಥವಾ ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ಹೊಂದಿದ್ದರೆ ಅವಕಾಡೊಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನಬಾರದು. ಅದು ನಿಮ್ಮ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅವಕಾಡೊ ಹಣ್ಣಿನಲ್ಲಿ ಫೈಬರ್ ಇದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು.
ಅಲರ್ಜಿ
ಕೆಲವರಿಗೆ ಅವಕಾಡೋ ಸೇವನೆಯಿಂದ ಅಲರ್ಜಿ ಕೂಡ ಉಂಟಾಗುವ ಸಾಧ್ಯತೆ ಇರುತ್ತದೆ. ಬಾಯಿಯೊಳಗೆ ಸುಡುವಿಕೆ, ತುರಿಕೆ, ಊತ ಅಥವಾ ತುರಿಕೆ, ಕಿರಿಕಿರಿ, ಉಸಿರಾಟದ ತೊಂದರೆಗೆ ಇದು ಕಾರಣವಾಗಬಹುದು. ಅವಕಾಡೋ ತಿಂದಾಗ ಈ ರೀತಿಯ ಸಮಸ್ಯೆಗಳನ್ನು ಕಂಡುಬಂದಲ್ಲಿ ಅದರಿಂದ ದೂರವಿರಿ.
ರಕ್ತ ತೆಳುವಾಗುವ ಸಾಧ್ಯತೆ
ಆವಕಾಡೊದಲ್ಲಿ ವಿಟಮಿನ್-ಕೆ ಕೊರತೆಯು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ನೀವು ರಕ್ತ ತೆಳುವಾಗಿಸುವಂತಹ ಔಷಧಿಗಳನ್ನು ಬಳಸುತ್ತಿದ್ದರೆ, ಹೆಚ್ಚು ಆವಕಾಡೊವನ್ನು ತಿನ್ನುವುದು ನಿಮಗೆ ಹಾನಿಕಾರಕವಾಗಿದೆ.
ಕಡಲೆಕಾಯಿ ಅಲರ್ಜಿ
ಕೆಲವರಿಗೆ ಶೇಂಗಾ ಅಥವಾ ಕಡಲೆಕಾಯಿ ಸೇವನೆ ಅಲರ್ಜಿ ಉಂಟುಮಾಡುತ್ತದೆ. ಅಂಥವರಿಗೆ ಅವಕಾಡೋ ಸೇವನೆ ಕೂಡ ಅಪಾಯಕಾರಿ. ಅವಕಾಡೊವನ್ನು ಸೇವಿಸದೇ ಇರುವುದು ಉತ್ತಮ.
ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು
ಅವಕಾಡೊ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ನೀವು ಅದನ್ನು ಅತಿಯಾಗಿ ಸೇವಿಸಿದರೆ ದೇಹಕ್ಕೆ ಹಾನಿ ಮಾಡುತ್ತದೆ. ಅವಕಾಡೊ ಸೇವನೆಯು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದಲ್ಲ.
ಅವಕಾಡೊವನ್ನು ಯಾವಾಗಲೂ ಮಿತವಾಗಿ ಸೇವಿಸಿ. ಇದನ್ನು ತಿಂದ ನಂತರ ಯಾವುದೇ ರೀತಿಯ ಅಲರ್ಜಿಯನ್ನು ಅನುಭವಿಸಿದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಪ್ರತಿಯೊಬ್ಬರ ದೈಹಿಕ ಸ್ಥಿತಿ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯು ವಿಭಿನ್ನವಾಗಿರುತ್ತದೆ. ಆದ್ದರಿಂದ ಅವಕಾಡೊವನ್ನು ಸೇವಿಸುವ ಮೊದಲು ಎಚ್ಚರಿಕೆ ವಹಿಸಿ.